ಮುಳ್ಳೇರಿಯ: ಬದಿಯಡ್ಕ ವಳಕುಂಜದ ಮಂಜು-ಶ್ರೀಜಾ ಸಹೋದರ-ಸಹೋದರಿಯ ಕಿಡ್ನಿ ಕಸಿ ಶಸ್ತ್ರ ಚಿಕಿತ್ಸೆಗಾಗಿ ಖಾಸಗಿ ಬಸ್ ‘ಕಾರುಣ್ಯ’ ಸಂಚಾರ ನಡೆಸಿ ಮಾದರಿಯಾಗಿದೆ.
ಕಾಸರಗೋಡು-ಅಡೂರು ಮಾರ್ಗದಲ್ಲಿ ಸಂಚರಿಸುವ ‘ರಶ್ಮಿ’ ಖಾಸಗೀ ಬಸ್ ಗುರುವಾರ ಕಾರುಣ್ಯ ಸಂಚಾರ ನಡೆಸಿತು. ಮುಳ್ಳೇರಿಯ ಪೇಟೆಯಲ್ಲಿ ಕಾರಡ್ಕ ಬ್ಲಾಕ್ ಪಂಚಾಯತಿ ಅಧ್ಯಕ್ಷ ಸಿ.ಜಿ.ಮ್ಯಾಥ್ಯೂ ಕಾರುಣ್ಯ ಸಂಚಾರಕ್ಕೆ ಚಾಲನೆ ನೀಡಿದರು. ಕಾರಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷ ಗೋಪಾಲಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಅಡೂರು ಠಾಣಾಧಿಕಾರಿ ಮಧುಸೂದನ್ ಮುಖ್ಯ ಅತಿಥಿಯಾಗಿದ್ದರು. ಚಿಕಿತ್ಸಾ ಸಮಿತಿಯ ಪದಾಧಿಕಾರಿಗಳಾದ ಗಂಗಾಧರ ಪಳ್ಳತ್ತಡ್ಕ, ಹಮೀದ್ ಪಳ್ಳತ್ತಡ್ಕ, ಆನಂದ ಕೆ.ಮವ್ವಾರ್, ರವೀಂದ್ರ ರೈ, ವಸಂತ ಚೆಂಪೆÇೀಡು, ರಾಘವ ಕನಕತ್ತೋಡಿ, ಶಶಿಧರ ಯಾದವ್, ಸುನೀಲ್ ಪುಂಡೂರು, ರಶ್ಮಿ ಬಸ್ ಮಾಲಕ ರಾಜೇಶ್, ಬಸ್ ಕಾರ್ಮಿಕರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು. ಗುರುವಾರ ನಡೆಸಿದ ಪೂರ್ಣ ಟಿಕೆಟ್ ದರದ ಮೊತ್ತವನ್ನು ಅನಾರೋಗ್ಯ ಪೀಡಿತರ ಚಿಕಿತ್ಸೆಗೆ ಈ ಮೂಲಕ ಹಸ್ತಾಂತರಿಸಲಾಗುವುದು.
ಕಿಡ್ನಿ ಕಸಿ ಚಿಕಿತ್ಸಾ ನೆರವಿಗೆ ಬಸ್ಸಿನ ಕಾರುಣ್ಯ ಯಾತ್ರೆ
0
ಡಿಸೆಂಬರ್ 24, 2022
Tags