ಕಾಸರಗೋಡು: ವಿದ್ಯುತ್ ಬಿಲ್ ಪಾವತಿ, ಫೆÇೀನ್ ರೀಚಾರ್ಜ್, ಟಿವಿ ಡಿಶ್ ರೀಚಾರ್ಜ್, ವಿಮಾ ಪ್ರೀಮಿಯಂ ಪಾವತಿ, ಬ್ಯಾಂಕ್ ಸಾಲ ಪಾವತಿ, ಕುಡಿಯುವ ನೀರಿನ ಬಿಲ್ ಪಾವತಿ, ಕ್ರೆಡಿಟ್ ಕಾರ್ಡ್ ಪಾವತಿ, ರೈಲು ಕಾಯ್ದಿರಿಸುವಿಕೆ, ಹೋಟೆಲ್ ಕೊಠಡಿ ಕಾಯ್ದಿರಿಸುವುದು ಮುಂತಾದ ವಿಷಯಗಳನ್ನು ಸಾಮಾನ್ಯ ಜನರಿಗೆ ಕಲಿಸಲು ಜಿಲ್ಲಾ ಪಂಚಾಯಿತಿ ಸಿದ್ಧತೆ ನಡೆಸಿದೆ.
ಸ್ಮಾರ್ಟ್ ಫೆÇೀನ್ ಇದ್ದರೂ ಆನ್ ಲೈನ್ ನಲ್ಲಿ ಬಿಲ್ ಪಾವತಿ ಹಾಗೂ ಹಣ ವರ್ಗಾವಣೆ ಮಾಡಲು ತಿಳಿಯದವರಿಗೆ ಡಿಜಿಟಲ್ ಸಾಕ್ಷರತಾ ಯೋಜನೆ ಮೂಲಕ ತರಬೇತಿ ನೀಡಲಾಗುವುದು. ಸೆಕೆಂಡ್‍ಗಳಲ್ಲಿ ಫೆÇೀನ್‍ನಲ್ಲಿ ಮಾಡಬಹುದಾದ ಕೆಲಸಗಳಿಗಾಗಿ ಫೆÇೀನ್ ಬಳಕೆದಾರರು ನೇರವಾಗಿ ಸಂಸ್ಥೆಗಳಿಗೆ ಹೋಗುವ ಅಗತ್ಯವನ್ನು ತೆಗೆದುಹಾಕುವುದು ಇದರ ಗುರಿಯಾಗಿದೆ. ಹೊಸ ತಲೆಮಾರು ತಂತ್ರಜ್ಞಾನವನ್ನು ಪಡೆದುಕೊಂಡರೂ, ಈ ವಿಷಯಗಳನ್ನು ಅರಿತುಕೊಳ್ಳದ ವಯಸ್ಕರಿಗೆ ತಂತ್ರಜ್ಞಾನವನ್ನು ನೀಡಲಾಗುತ್ತದೆ. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಅಧ್ಯಕ್ಷತೆಯಲ್ಲಿ ನಡೆದ ಡಿಜಿಟಲ್ ಲಿಟರಸಿ ಕೋರ್ ಗ್ರೂಪ್‍ನ ಸಮಾಲೋಚನಾ ಸಭೆಯಲ್ಲಿ ಜನವರಿ 15 ರಿಂದ ವಾರ್ಡ್ ಆಧಾರದ ಮೇಲೆ ತರಗತಿಗಳನ್ನು ನಡೆಸಲು ನಿರ್ಧರಿಸಲಾಯಿತು.
ಮೊದಲ ಹಂತದಲ್ಲಿ ಜಿಲ್ಲೆಯಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳ ಅಧ್ಯಕ್ಷರ ಜಿಲ್ಲಾ ಮಟ್ಟದ ಸಂಘಟನಾ ಸಮಿತಿ ರಚಿಸಲಾಗುವುದು. ಚಟುವಟಿಕೆಗಳು ಪಂಚಾಯತ್ ಕೇಂದ್ರಿತವಾಗಿರುತ್ತದೆ. ಪಂಚಾಯತ್ ಮತ್ತು ವಾರ್ಡ್ ಮಟ್ಟದ ಸಂಘಟನಾ ಸಮಿತಿಗಳನ್ನು ರಚಿಸಿ ಸ್ಥಳೀಯ ಮಟ್ಟದಲ್ಲಿ ಕುಟುಂಬಶ್ರೀ ನೆರೆಹೊರೆಯವರು, ಸಾಕ್ಷರತಾ ಕೇಂದ್ರಗಳು ಮತ್ತು ವಾಚನಾಲಯಗಳನ್ನು ಸೇರಿಸಿ ತರಬೇತಿ ನೀಡಲಾಗುವುದು. ವಾರ್ಡ್ ಮಟ್ಟದಲ್ಲಿ ಐವತ್ತು ಮನೆಗಳಿಗೆ ಒಂದು ವರ್ಗವಾಗಿ ಯೋಜನೆ ರೂಪಿಸಲಾಗಿದೆ. ಯೋಜನೆಯು ಜಿಲ್ಲಾ ಮತ್ತು ಪಂಚಾಯತ್ ಮಟ್ಟದಲ್ಲಿ ವಿವಿಧ ಇಲಾಖೆಗಳಿಂದ ಸಮನ್ವಯಗೊಳ್ಳುತ್ತದೆ.
ಜಿಲ್ಲಾ ಪಂಚಾಯಿತಿ ಕಾರ್ಯದರ್ಶಿ ಕೆ.ಪ್ರದೀಪನ್, ಅಕ್ಷಯ ಡಿಪಿಎಂಎಸ್ ಎಸ್.ನಿವೇದ್, ನವಕೇರಳ ಮಿಷನ್ ಜಿಲ್ಲಾ ಸಂಯೋಜಕ ಕೆ.ಬಾಲಕೃಷ್ಣನ್, ಸಾಕ್ಷರತಾ ಮಿಷನ್ ಜಿಲ್ಲಾ ಸಂಯೋಜಕ ಪಿ.ಎನ್.ಬಾಬು, ಅಕ್ಷಯ ಪ್ರತಿನಿಧಿಗಳಾದ ಬಿ.ಸಂತೋμï ಕುಮಾರ್, ಎ.ವಿ.ಬಾಬು, ಜಿಲ್ಲಾ ಪಂಚಾಯಿತಿ ಹಿರಿಯ ಅಧೀಕ್ಷಕ ಬಿ.ಎನ್.ಸುರೇಶ್, ಜಿಲ್ಲಾ ಮಾಹಿತಿ ಅಧಿಕಾರಿ ಕೆ.ರಾಜನ್ ಮತ್ತಿತರರು ಭಾಗವಹಿಸಿದ್ದರು.
ಡಿಜಿಟಲ್ ಸಾಕ್ಷರತಾ ಯೋಜನೆಯ ಮೂಲಕ ಸ್ಮಾರ್ಟ್ ಪೋನ್ ಪಾಠ ವಾರ್ಡ್ ಮಟ್ಟದಲ್ಲಿ ತರಬೇತಿ ತರಗತಿಗಳೊಂದಿಗೆ ಜಿಲ್ಲಾ ಪಂಚಾಯತ್
0
ಡಿಸೆಂಬರ್ 24, 2022