ಭೋಪಾಲ್: ಶ್ರೀರಾಮ ಮತ್ತು ಹನುಮಂತ ದೇವರು ಬಿಜೆಪಿಯ ಸ್ವತ್ತಲ್ಲ ಎಂದು ಸ್ವಪಕ್ಷದ ವಿರುದ್ಧವೇ ಕೇಂದ್ರದ ಮಾಜಿ ಸಚಿವೆ ಉಮಾಭಾರತಿ ಆಕ್ರೋಶ ಹೊರಹಾಕಿದ್ದಾರೆ.
ಮಧ್ಯಪ್ರದೇಶ ಮಾಜಿ ಸಿಎಂ ಕಮಲನಾಥ್ ಅವರು ರಾಜ್ಯದಲ್ಲಿ ಹನುಮಂತ ಮಂದಿರ ನಿರ್ಮಾಣ ಮಾಡುವುದಾಗಿ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಉಮಾಭಾರತಿ, ರಾಮ ಮತ್ತು ಹನುಮಂತ ಬಿಜೆಪಿ ಹಕ್ಕುಸ್ವಾಮ್ಯವಲ್ಲ ಎಂದರು.
ದೇವತೆಗಳು ಯಾವುದೇ ಜಾತಿ ಅಥವಾ ಧರ್ಮಕ್ಕೆ ಸೀಮಿತವಾದದ್ದಲ್ಲ. ಭಗವಾನ್ ರಾಮ ಮತ್ತು ಹನುಮಂತ ಬಿಜೆಪಿ ಪಕ್ಷದ ಕಾರ್ಯಕರ್ತರಲ್ಲ. ಜನಸಂಘದ ಅಸ್ತಿತ್ವಕ್ಕೂ ಮುನ್ನ ಅಥವಾ ಮೊಘಲರು ಮತ್ತು ಬ್ರಿಟಿಷರ ಆಳ್ವಿಕೆಗೂ ಮುನ್ನವೇ ದೇವರ ಹೆಸರು ಅಸ್ತಿತ್ವದಲ್ಲಿದೆ. ಇತರರು ಶ್ರೀರಾಮ ಅಥವಾ ಹನುಮಂತನ ಭಕ್ತರಾಗಲು ಸಾಧ್ಯವಿಲ್ಲ ಎಂಬ ತಪ್ಪು ಕಲ್ಪನೆಯನ್ನು ಯಾರೂ ಹೊಂದಬಾರದು. ಇಡೀ ಬ್ರಹ್ಮಾಂಡಕ್ಕೆ ದೇವರು ಎಂದರು.