ಇಂದೋರ್ : ಅಗತ್ಯ ಬಿದ್ದರೆ ಲವ್ ಜಿಹಾದ್ ವಿರುದ್ಧದ ಕಾನೂನನ್ನು ಮತ್ತಷ್ಟು ಕಠಿಣಗೊಳಿಸಿ ಜಾರಿಗೆ ತರಲಾಗುವುದು ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿದ್ದಾರೆ.
ಮಧ್ಯಪ್ರದೇಶ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆ 2021ನ್ನು ಉಲ್ಲೇಖಿಸಿ ಮಾತನಾಡಿದ ಅವರು, ಬಲವಂತವಾಗಿ, ಪ್ರಭಾವ ಬಳಸಿ, ಆಮಿಷವೊಡ್ಡಿ, ಹಣಕಾಸು ಸಹಾಯ ಅಥವಾ ಮದುವೆಯ ಭರವಸೆ ಸೇರಿದಂತೆ ಇತರೆ ಮೋಸದ ತಂತ್ರಗಳನ್ನು ಬಳಸಿ ಧಾರ್ಮಿಕವಾಗಿ ಮತಾಂತರ ನಡೆಸುವುದನ್ನು ನಿಷೇಧಿಸಲಾಗಿದೆ. ಅಂತಹವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದರು
ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರ ತಾಂತ್ಯ ಅವರ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪರಿಶಿಷ್ಟ ಮಹಿಳೆಯರ ಭೂಮಿ ಕಸಿಯುವ ಉದ್ಧೇಶದಿಂದ ಮದುವೆಯಾಗುತ್ತಿರುವವರ ಪ್ರಕರಣಗಳಲ್ಲಿ ಲವ್ ಜಿಹಾದ್ ವಾಸನೆ ಕಂಡುಬಂದಿದೆ. ಮದುವೆಯ ಬಳಿಕ ಮತಾಂತರ ಮಾಡಿಕೊಳ್ಳುತ್ತಿದ್ದಾರೆ ಎಂದರು.
ಗ್ರಾಮಸಭೆ, ಪಂಚಾಯ್ತಿಗಳಿಗೆ ಲವ್ ಜಿಹಾದ್ ಕಾಯ್ದೆಯು ಅಧಿಕಾರ ನೀಡುವುದರಿಂದ ಸಮುದಾಯದ ಹಿತಾಸಕ್ತಿಗಳಿಗೆ ವಿರುದ್ಧವಾದ ಎಲ್ಲಾ ಚಟುವಟಿಕೆಗಳು ನಿಲ್ಲುತ್ತವೆ ಎಂದು ಶಿವರಾಜ್ ಸಿಂಗ್ ಚೌಹಾಣ್ ಅಭಿಪ್ರಾಯಪಟ್ಟರು.