ಕಾಸರಗೋಡು: ರಾಮದಾಸನಗರ ದೇವರಗುಡ್ಡೆ ಶ್ರೀಶೈಲ ಮಹಾದೇವ ದೇವಸ್ಥಾನದಲ್ಲಿ ಲೋಕ ಕಲ್ಯಾಣಾರ್ಥವಾಗಿ ನಡೆಯುತ್ತಿರುವ ಧನುಪೂಜಾ ಮಹೋತ್ಸವ ಅಂಗವಾಗಿ ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಜ. 1ರಂದು ದೇವಸ್ಥಾನಕ್ಕೆ ಭೇಟಿ ನೀಡುವರು. ದೇವಸ್ಥಾನದಲ್ಲಿ ಅಂದು ಬೆಳಗ್ಗೆ 6ಕ್ಕೆ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅವರ ನೇತೃತ್ವದಲ್ಲಿ ನಡೆಯಲಿರುವ ಸಾಮೂಹಿಕ ಸರ್ವೈಶ್ವರ್ಯ ಪೂಜೆಯಲ್ಲಿ ಶ್ರೀಗಳು ಪಾಲ್ಗೊಳ್ಳುವರು. ಧನುಪೂಜಾ ಮಹೋತ್ಸವ ಅಂಗವಾಗಿ ಅಂದು ಬೆಳಗ್ಗೆ 4.30ರಿಂದ ಪಾಯಿಚ್ಚಾಲ್ ಶ್ರೀ ಮಹಾವಿಷ್ಣು ಭಜನಾಸಂಘ ವತಿಯಿಂದ ಭಜನೆ ನಡೆಯುವುದು.
ದೇವರಗುಡ್ಡೆ ಶ್ರೀಶೈಲ ಕ್ಷೇತ್ರದಲ್ಲಿ ಸಾಮೂಹಿಕ ಸರ್ವೈಶ್ವರ್ಯ ಪೂಜೆ, ಎಡನೀರುಶ್ರೀ ಭೇಟಿ
0
ಡಿಸೆಂಬರ್ 30, 2022
Tags