ಕಾಸರಗೋಡು: ಬೇಸಿಗೆ ಕಲದಲ್ಲಿ ತರಕಾರಿ ಬೆಳೆಯುವ ರೈತರಿಗೆ ಕೃಷಿ ಇಲಾಖೆ ಬೆಂಬಲ ನೀಡುತ್ತಿದೆ. ಬೇಸಿಗೆ ಕೃಷಿಯಲ್ಲಿ ಮುಖ್ಯವಾಗಿ ಕಲ್ಲಂಗಡಿ ಬೇಳೆಕಾಳುಗಳು, ಬೆಂಡೆ, ಟೊಮ್ಯಾಟೊ, ಮೆಣಸಿನಕಾಯಿ, ಬದನೆ, ಪಡುವಲಕಾಯಿ, ಮತ್ತು ಪಾಲಕ ಮುಂತಾದ ಬೆಳೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಬಹುದಾಗಿದೆ.
ಕೃಷಿ ಇಲಾಖೆಯ ತರಕಾರಿ ಅಭಿವೃದ್ಧಿ ಯೋಜನೆಯ ಅಂಗವಾಗಿ ಪ್ರತಿ ಹೆಕ್ಟೇರ್‍ಗೆ 20000 ರೂ. ರೈತರಿಗೆ ಆರ್ಥಿಕ ನೆರವು ದೊರೆಯಲಿದೆ. ಚಪ್ಪರ ಕೃಷಿಗೆ 25000 ರೂ. ತಾರಸಿ ಹಾಗೂ ಹೊಲಗಳಲ್ಲಿ ಕೃಷಿ ಮಾಡುತ್ತಿರುವ ರೈತರಿಗೆ ಇಲಾಖೆ ಸಹಾಯಧನವನ್ನೂ ನೀಡುತ್ತಿದೆ. ಕೃಷಿಕರು 5000 ರೂಪಾಯಿ ಖರ್ಚು ಮಾಡಿದರೆ 2000 ರೂಪಾಯಿವರೆಗೆ ಸಹಾಯಧನ ಲಭ್ಯವಾಘಲಿದೆ. ಬೇಸಿಗೆ ತರಕಾರಿ ಕೃಷಿಗೆ ಸಹಾಯಧನ ಪಡೆಯಲು ಆಯಾ ಪ್ರದೇಶದ ಕೃಷಿ ಭವನಗಳಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿಯೊಂದಿಗೆ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‍ಬುಕ್, ಭೂ ಕಂದಾಯ ಪಾವತಿಸಿದ ರಶೀದಿ ಮತ್ತು ಜಮೀನು ಮಾಲೀಕರ ಒಪ್ಪಿಗೆ ಪತ್ರವನ್ನು ಸಲ್ಲಿಸಬೇಕಾಗಿದೆ.
ಬೇಸಿಗೆ ತರಕಾರಿ ಕೃಷಿ: ಕೃಷಿ ಇಲಾಖೆಯಿಂದ ಸಹಾಯಧನ
0
ಡಿಸೆಂಬರ್ 16, 2022