ಮುಳ್ಳೇರಿಯ: ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ಕೀರಿಕ್ಕಾಡು ಸ್ಮಾರಕ ಸಭಾಭವನದಲ್ಲಿ ಭಾನುವಾರ ‘ಗಾನ ನೃತ್ಯ ವೈವಿಧ್ಯ’ ಸಾಂಸ್ಕøತಿಕ ಕಾರ್ಯಕ್ರಮ ಪ್ರಸ್ತುತಗೊಂಡಿತು. ಬನಾರಿ ಕಲಾಸಂಘದ ವಾರ್ಷಿಕೋತ್ಸವ ಮತ್ತು ಗಡಿ ಸಂಸ್ಕೃತಿ ಉತ್ಸವದ ಪ್ರಯುಕ್ತ ಹಮ್ಮಿಕೊಂಡ ಈ ಕಾರ್ಯಕ್ರಮವು ಯಶಸ್ವಿಯಾಗಿ ಮೂಡಿಬಂತು.
.ವಿ.ಹೆಚ್.ಎಸ್.ಎಸ್ ದೇಲಂಪಾಡಿ ಶಾಲೆಯ ವಿದ್ಯಾರ್ಥಿ, ವಿದ್ಯಾರ್ಥಿನಿಯರಾದ ಕಾವ್ಯಶ್ರೀ, ಕವಿತಾ, ಅಭಿಜ್ಞಾ, ಅಶ್ವಿನಿ, ಭುವನೇಶ್ವರಿ, ಪ್ರತೀಕ್ಷ, ತೃಶಾ, ಪ್ರೀತಿಕಾ ಹಾಗೂ ಭವಿಷ್ಯ ಹಾಗೂ ಸ್ಥಳೀಯರಾದ ಈಶ್ವರಿ ಪೃಥ್ವಿ ಬನಾರಿ, ಕೀರ್ತಿ, ಲಿಖಿತಾ, ಹಸ್ತಾ, ಆಶ್ಲೇμï, ಲೀಶ್ಮ, ಜಾಹ್ನವಿ, ಶಮಂತ್, ತಶ್ಮಿ ಮತ್ತು ಲಾಸ್ಯ ಬೆಳ್ಳಿಪ್ಪಾಡಿ ಇವರು ವಿವಿಧ ಪ್ರಕಾರದ ನೃತ್ಯ ಪ್ರದರ್ಶಿಸಿದರು. ಲತಾ ಆಚಾರ್ಯ ಬನಾರಿ ಕಾರ್ಯಕ್ರಮ ನಿರೂಪಿಸಿದರು.