ಕಾಸರಗೋಡು: ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕದ ವತಿಯಿಂದ ಡಿ. 31ಹಾಗೂ ಜ. 1ರಂದು ಪೆರ್ಲದಲ್ಲಿ ನಡೆಸಲು ತೀರ್ಮಾನಿಸಲಾಗಿದ್ದ ಕಾಸರಗೋಡು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮುಂದೂಡಲಾಗಿದೆ. ಬೆಂಗಳೂರಿನ ಕೇಂದ್ರ ಸಮಿತಿ ನಿರ್ದೇಶ ಪ್ರಕಾರ ಈ ಬದಲಾವಣೆ ಮಾಡಲಾಗಿದೆ. ಬೆಂಗಳೂರಿನ ಕೇಂದ್ರ ಸಮಿತಿ ನಿರ್ದೇಶಪ್ರಕಾರ ಸಮ್ಮೇಳನ ಸ್ವಾಗತ ಸಮಿತಿ ಡಿ. 31ಹಾಗೂ ಜ. 1ರಂದು ಜಿಲ್ಲಾ ಸಮ್ಮೇಳನ ನಡೆಸುವ ಬಗ್ಗೆ ತೀರ್ಮಾನಿಸಲಾಗಿತ್ತು.
ಬೆಂಗಳೂರಿನ ಕೇಂದ್ರ ಸಾಹಿತ್ಯ ಪರಿಷತ್ ವತಿಯಿಂದ 2023 ಜ. 6ರಿಂದ 8ರ ವರೆಗೆ ಹಾವೇರಿಯಲ್ಲಿ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದ್ದು, ಇದರ ಪೂರ್ವಸಿದ್ಧತೆಗಳಿಗೆ ಅಡಚಣೆಯಾಗುವ ಸಾದ್ಯತೆಯಿರುವುದರಿಂದ ಡಿ. 18ರ ಒಳಗೆ ಅಥವಾ 2023ರ ಜನವರಿ 15ರ ನಂತರ ನಡೆಸಲು ನಿರ್ದೇಶಿಸಿದೆ. ಈ ಹಿನ್ನೆಲೆಯಲ್ಲಿ ಸ್ವಾಗತ ಸಮಿತಿ ಈ ಹಿಂದೆ ತೀರ್ಮಾನಿಸಿರುವ ದಿನಾಂಕದಂದು ಸಮ್ಮೇಳನ ನಡೆಸಲಾಗದೆ, ಮುಂದೂಡಬೇಕಾಗಿ ಬಂದಿದೆ. ಮತ್ತೆ ಸ್ವಾಗತ ಸಮಿತಿ ಸಭೆ ಸೇರಿ ಮುಂದಿನ ದಿನಾಂಕವನ್ನು ಪ್ರಕಟಿಸಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕ ಅಧ್ಯಕ್ಷ ಎಸ್.ವಿ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಸರಗೋಡು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಮುಂದೂಡಿಕೆ
0
ಡಿಸೆಂಬರ್ 06, 2022
Tags