ಕಾಸರಗೋಡು: ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಶನಿವಾರ ಜಿಲ್ಲೆಯ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ನಿಟ್ಟಿನಲ್ಲಿ ಡಿ. 24ರಂದು ಕಾಸರಗೋಡಿಗೆ ಭೇಟಿ ನೀಡಲಿದ್ದರೆ. ಬೆಳಗ್ಗೆ 10ಕ್ಕೆ ಪಳ್ಳಿಕೆರೆ ಬೀಚ್‍ನಲ್ಲಿ ಬೇಕಲ್ ಅಂತಾರಾಷ್ಟ್ರೀಯ ಬೀಚ್ ಉತ್ಸವ ಮತ್ತು 11.30ಕ್ಕೆ ಕಯ್ಯೂರಿನಲ್ಲಿ ನಡೆಯಲಿರುವ ಕಯ್ಯೂರ್ ಫೆಸ್ಟ್ ಅನ್ನು ಮುಖ್ಯಮಂತ್ರಿ ಉದ್ಘಾಟಿಸಲಿದ್ದಾರೆ. ಮುಖ್ಯಮಂತ್ರಿ ಭೇಟಿ ಹಿನ್ನೆಲೆಯಲ್ಲಿ ಬೇಕಲದಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಪೊಲೀಸರ ವಿಶೇಷ ತಂಡ ಗುರುವಾರ ಬೇಕಲಕ್ಕೆ ಭೇಟಿ ನೀಡಿ ಭದ್ರತಾ ಕಾರ್ಯಗಳ ಬಗ್ಗೆ ಅವಲೋಕನ ನಡೆಸಿತು. ಮುಖ್ಯಮಂತ್ರಿ ಪಲ್ಗೊಳ್ಳಳಿರುವ ವೇದಿಕೆಗಳ ಸೂಕ್ಷ್ಮ ತಪಾಸಣೆ ನಡೆಸಲಾಯಿತು.
ನಾಳೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕಾಸರಗೋಡು ಭೇಟಿ: ಬಿಗು ಭದ್ರತೆ
0
ಡಿಸೆಂಬರ್ 22, 2022
Tags