ಕಾಸರಗೋಡು: ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರೊಂದಿಗೆ ಮಾಧ್ಯಮ ಪ್ರತಿನಿಧಿಗಳ ಸಹಕಾರ ಅನಿವಾರ್ಯ ಎಂದು ಕಾಸರಗೋಡುಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮ್ಮದ್ ನದಿಮುದ್ದೀನ್ ಐಪಿಎಸ್ ತಿಳಿಸಿದ್ದಾರೆ.
ಅವರು ಕಾಸರಗೋಡು ಪ್ರೆಸ್‍ಕ್ಲಬ್ ವತಿಯಿಂದ ಶನಿವಾರ ಪ್ರೆಸ್‍ಕ್ಲಬ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕ್ರಿಸ್‍ಮಸ್-ಹೊಸ ವರ್ಷಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಕಾಸರಗೋಡು ಪ್ರೆಸ್‍ಕ್ಲಬ್ ಅಧ್ಯಕ್ಷ ಮಹಮ್ಮದ್ ಹಾಶಿಂ ಅಧ್ಯಕ್ಷತೆ ವಹಿಸಿದ್ದರು. ವಂದನೀಯ ಧರ್ಮಗುರು ಬಿಜು ಮುಖ್ಯ ಅತಿಥಿಯಾಘಿ ಭಾಗವಹಿಸಿ, ಕ್ರಿಸ್‍ಮಸ್ ಸಂದೇಶ ನೀಡಿದರು. ಈ ಸಂದರ್ಭ ವಿಶ್ವ ಫುಟ್‍ಬಾಲ್ ಪಂದ್ಯಾಟದ ಬಗ್ಗೆ ನಡೆಸಲಾದ ಕೆಲವೊಂದು ಪ್ರಶ್ನಾವಳಿ ಒಳಗೊಂಡ ಸ್ಪರ್ಧೆಯಲ್ಲಿ ವಿಜೇತರು ಹಾಗೂ ಓಣಂ ಅಂಗವಾಗಿ ಪ್ರೆಸ್‍ಕ್ಲಬ್ ವತಿಯಿಂದ ಆಯೋಜಿಸಲಾದ ಹೂವಿನರಂಗೋಲಿಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಜತೆಕಾರ್ಯದರ್ಶಿ ಪ್ರದೀಪ್‍ನಾರಾಯಣ್ ಉಪಸ್ಥಿತರಿದ್ದರು. ಪ್ರೆಸ್‍ಕ್ಲಬ್ ಕಾರ್ಯದರ್ಶಿ ಕೆ.ವಿ ಪದ್ಮೇಶ್ ಸ್ವಾಗತಿಸಿದರು. ಕೋಶಾಧಿಕಾರಿ ಶೈಜು ಪಿಲಾತ್ತರ ವಂದಿಸಿದರು.
ಶಾಂತಿಸುವ್ಯವಸ್ಥೆ ಕಾಪಾಡುವಲ್ಲಿ ಮಾಧ್ಯಮ ಪ್ರತಿನಿಧಿಗಳ ಸಹಕಾರ ಅನಿವಾರ್ಯ-ಎಎಸ್‍ಪಿ ಮಹಮ್ಮದ್ ನದಿಮುದ್ದೀನ್
0
ಡಿಸೆಂಬರ್ 31, 2022
Tags