ನವದೆಹಲಿ: ದಟ್ಟ ಮಂಜಿನಿಂದ ಕೂಡಿರುವ ಚಳಿಗಾಲದ ಅವಧಿಯಲ್ಲಿ ರೈಲುಗಳು ನಿಗದಿತ ಗುರಿ ಕ್ರಮಿಸಲು ಹೆಚ್ಚಿನ ಸಮಯ ತೆಗೆದುಕೊಳ್ಳಲಿದ್ದು, ಇದನ್ನು ತಪ್ಪಿಸುವುದಕ್ಕಾಗಿ ರೈಲುಗಳ ವೇಗ ಹೆಚ್ಚಿಸಲು ರೈಲ್ವೆ ಇಲಾಖೆ ಮುಂದಾಗಿದೆ.
'ರೈಲು ಎಂಜಿನ್ಗಳಿಗೆ ಅಳವಡಿಸಲಾಗುವ ಮಂಜಿನ ಸಾಧನಗಳ ನೆರವಿನೊಂದಿಗೆ ಅವುಗಳ ವೇಗದ ಮಿತಿಯನ್ನು ಈಗಿರುವ 60 ಕಿ.ಮೀ ನಿಂದ (ಗಂಟೆಗೆ) 75 ಕಿ.ಮೀ ಗೆ ಏರಿಕೆ ಮಾಡಲು ನಿರ್ಧರಿಸಲಾಗಿದೆ' ಎಂದು ಭಾರತೀಯ ರೈಲ್ವೆ ತಿಳಿಸಿದೆ.