ಮಲಪ್ಪುರಂ: ಲೆಗ್ಗಿನ್ಸ್ ಧರಿಸಿ ಶಾಲೆಗೆ ಬಂದ ಶಿಕ್ಷಕಿಯೊಬ್ಬರಲ್ಲಿ ಅನುಚಿತವಾಗಿ ವರ್ತಿಸಿರುವ ಕುರಿತು ಮಹಿಳಾ ಆಯೋಗ, ಯುವ ಆಯೋಗ ಹಾಗೂ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಲಾಗಿದೆ.
ಮುಖ್ಯ ಶಿಕ್ಷಕನಿಂದ ಅನುಚಿತ ಅನುಭವ ಹೊಂದಿದ್ದ ಶಿಕ್ಷಕಿ ಸರಿತಾ ರವೀಂದ್ರನಾಥ್ ಮೂರೂ ಆಯೋಗಗಳಲ್ಲಿ ದೂರು ದಾಖಲಿಸಿದ್ದಾರೆ. ಕಳೆದ ಬುಧವಾರ ಸರಿತಾ ಅವರು ಲೆಗ್ಗಿಂಗ್ಸ್ ಧರಿಸಿ ಶಾಲೆಗೆ ಆಗಮಿಸಿದ್ದಾಗ ಅವಮಾನಿಸಲಾಗಿದೆ ಎಮದು ದೂರಲಾಗಿದೆ.
ಸರಿತಾ ಮಲಪ್ಪುರಂನ ಎಡಪಟ್ಟದ ಸಿಕೆಎಚ್‍ಎಂ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಶಿಕ್ಷಕಿ. ಘಟನೆಯ ನಂತರ, ಸಾಮಾಜಿಕ ಜಾಲತಾಣಗಳಲ್ಲಿ ಸರಿತಾ ವಿರುದ್ಧ ನಿಂದನಾತ್ಮಕ ಕಾಮೆಂಟ್‍ಗಳು ಕಾಣಿಸಿಕೊಂಡವು. ಈ ಹಿನ್ನೆಲೆಯಲ್ಲಿ ಮಹಿಳಾ ಆಯೋಗ, ಯುವ ಆಯೋಗ ಹಾಗೂ ಮಾನವ ಹಕ್ಕುಗಳ ಆಯೋಗ ದೂರು ದಾಖಲಿಸಲಾಗಿದೆ. ಶಾಲಾ ಪಿಟಿಎ ಕಾರ್ಯಕಾರಿಣಿ ಸಭೆಯಲ್ಲೂ ಸರಿತಾ ಅವರನ್ನು ಟೀಕಿಸಲಾಗಿತ್ತು.
ಮಹಿಳಾ ಆಯೋಗ, ಯುವ ಆಯೋಗ ಮತ್ತು ಮಾನವ ಹಕ್ಕುಗಳ ಆಯೋಗದ ಹೊರತಾಗಿ, ಸರಿತಾ ಅವರು ಮಲಪ್ಪುರಂನ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೂ ದೂರು ಸಲ್ಲಿಸಿದ್ದಾರೆ. ಈ ಕುರಿತು ಡಿಡಿಇಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಸರಿತಾ ಅವರು ದೂರಿನೊಂದಿಗೆ ಉಪನಿರ್ದೇಶಕರನ್ನು ಸಂಪರ್ಕಿಸಿರುವರು.
ಲೆಗ್ಗಿಂಗ್ಸ್ ಧರಿಸಿದ್ದಕ್ಕೆ ಅವಮಾನ ಮಾಡಿದ ಘಟನೆ; ಶಿಕ್ಷಕಿಯಿಂದ ಮುಖ್ಯ ಶಿಕ್ಷಕರ ವಿರುದ್ಧ ಮಾನವ ಹಕ್ಕುಗಳು, ಮಹಿಳಾ ಮತ್ತು ಯುವ ಆಯೋಗದಲ್ಲಿ ದೂರು ದಾಖಲು
0
ಡಿಸೆಂಬರ್ 05, 2022