ಕೊಚ್ಚಿ: ಕೋಯಿಕ್ಕೋಡ್ ವಿಮಾನ ನಿಲ್ದಾಣಕ್ಕೆ ಧಾವಂತದಲ್ಲಿ ಬಂದ ದಕ್ಷಿಣ ಕೊರಿಯಾದ ಮಹಿಳೆಯೊಬ್ಬರನ್ನು ವಿಚಾರಣೆ ನಡೆಸಿರುವ ಅಧಿಕಾರಿಗಳಿಗೆ ಆಘಾತಕಾರಿ ಸಂಗತಿಯೊಂದು ಗೊತ್ತಾಗಿದೆ. ದಾಖಲೆ ಪತ್ರಗಳನ್ನು ಕೇಳಿದ ಅಧಿಕಾರಿಗಳಿಗೆ ಮಹಿಳೆಯು ತಮ್ಮ ಮೇಲಿನ ಲೈಂಗಿಕ ದೌರ್ಜನ್ಯದ ಕುರಿತು ಮಾಹಿತಿ ನೀಡಿದ್ದಾರೆ.
ಮಹಿಳೆಯ ಬಳಿ ಸರಿಯಾದ ಪ್ರಯಾಣ ದಾಖಲೆಗಳಿಲ್ಲ ಎಂಬ ಕಾರಣಕ್ಕೆ ಅವರನ್ನು ವಿಮಾನ ನಿಲ್ದಾಣದ ವಲಸೆ ಅಧಿಕಾರಿಗಳು ಸ್ಥಳೀಯ ಪೊಲೀಸರಿಗೆ ಹಸ್ತಾಂತರಿಸಿದ್ದರು.
ಪೊಲೀಸರು ವಿವರವಾದ ತನಿಖೆ ನಡೆಸಿದಾಗ, ಮಹಿಳೆ ಮಾನಸಿಕವಾಗಿ ಕುಗ್ಗಿರುವುದು ಗೊತ್ತಾಗಿದೆ. ನಂತರ ಸಮಾಧಾನಪಡಿಸಿ, ವೈದ್ಯಕೀಯ ಪರೀಕ್ಷೆ ನಡೆಸಿದಾಗ ಲೈಂಗಿಕ ದೌರ್ಜನ್ಯ ನಡೆದಿರುವುದು ಬಯಲಾಗಿದೆ.
ಕೋಯಿಕ್ಕೋಡ್ ನಗರದಲ್ಲಿ ಉಳಿದುಕೊಂಡಿದ್ದಾಗ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದಾಗಿ ವೈದ್ಯರಿಗೆ ತಿಳಿಸಿದ್ದಾರೆ. ವೈದ್ಯಕೀಯ ಪರೀಕ್ಷೆಯಲ್ಲೂ ಇದು ದೃಢವಾಗಿದೆ ಎನ್ನಲಾಗಿದೆ.
ಪೊಲೀಸರ ತನಿಖಾ ತಂಡವು ವೈದ್ಯರಿಂದ ಹೇಳಿಕೆಯನ್ನು ಪಡೆದುಕೊಂಡಿದೆ. ತನಿಖೆ ಕೈಗೊಂಡಿದೆ.