ಇಡುಕ್ಕಿ: ಇಡುಕ್ಕಿಯಲ್ಲಿ ಶಬರಿಮಲೆ ಯಾತ್ರಿಕರ ವಾಹನ ಪಲ್ಟಿಯಾಗಿ ಎಂಟುಮಂದಿ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ. ಕುಮಳಿ ಸಮೀಪದ ತಮಿಳುನಾಡು ಗಡಿಯಲ್ಲಿ ಅಪಘಾತ ಸಂಭವಿಸಿದೆ. ಮೃತರು ತಮಿಳುನಾಡಿನ ಅಯ್ಯಪ್ಪ ಭಕ್ತರು.
ಮಗು ಸೇರಿದಂತೆ ಹತ್ತು ಮಂದಿ ವಾಹನದಲ್ಲಿದ್ದರು. ಗಾಯಾಳುಗಳನ್ನು ಕುಮಳಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಲ್ಲಿ ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ. ಕುಮಳಿ-ಕಂಬಂ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ. ಕೊಟ್ಟಾರಕ್ಕರ ದಿಂಡಿಕಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ನಿಯಂತ್ರಣ ತಪ್ಪಿ ಸೇತುವೆಯಿಂದ ಕೆಳಗೆ ಬಿದ್ದಿದೆ. ಮುಲ್ಲಪೆರಿಯಾರ್‍ನಿಂದ ತಮಿಳುನಾಡಿಗೆ ನೀರು ಸಾಗಿಸುತ್ತಿದ್ದ ಪೆನ್‍ಸ್ಟಾಕ್ ಒಂದರ ಮೇಲೆ ಕಾರು ಬಿದ್ದಿದೆ.
ಸೇತುವೆಗೆ ಡಿಕ್ಕಿ ಹೊಡೆದಾಗ ವ್ಯಾನ್‍ನಲ್ಲಿದ್ದ ಏಳು ವರ್ಷದ ಬಾಲಕ ಹೊರಕ್ಕೆಸೆಯಲ್ಪಟ್ಟಿದ್ದಾನೆ. ಈ ವೇಳೆ ಮುಂದೆ ಸಾಗುತ್ತಿದ್ದ ವಾಹನ ನಿಲ್ಲಿಸಿ ಮಗುವನ್ನು ಕುಮಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿರುವರು. ಕುಮಳಿ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಕುಮಳಿ ಪೆÇಲೀಸರು, ತಮಿಳುನಾಡು ಪೆÇಲೀಸರು ಹಾಗೂ ಅಗ್ನಿಶಾಮಕ ದಳ ಜಂಟಿಯಾಗಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಅಪಘಾತಕ್ಕೆ ಕಾರಣ ಅತಿಯಾದ ವೇಗ ಅಥವಾ ಚಾಲಕ ನಿದ್ರೆಗೆ ಜಾರಿದಿರಬಹುದು ಎಂದು ಪ್ರಾಥಮಿಕ ತೀರ್ಮಾನವಾಗಿದೆ.
ಇಡುಕ್ಕಿಯಲ್ಲಿ ಶಬರಿಮಲೆ ಯಾತ್ರಿಕರ ವಾಹನ ಪಲ್ಟಿ; ಎಂಟು ಸಾವು
0
ಡಿಸೆಂಬರ್ 24, 2022
Tags