ಕಾಸರಗೋಡು: ಜಿಲ್ಲೆಯ ಪೆರಿಯ ಕಲ್ಯೋಟ್‍ನ ಯುವಕಾಂಗ್ರೆಸ್ ಕಾರ್ಯಕರ್ತರಾದ ಕೃಪೇಶ್ ಮತ್ತು ಶರತ್‍ಲಾಲ್ ಕೊಲೆ ಪ್ರಕರಣದ ಬಗ್ಗೆ ಚಾರ್ಜ್‍ಶೀಟ್ ಹೊರಡಿಸಲಾಗಿರುವ ಆರೋಪಗಳ ಬಗ್ಗೆ ಎರ್ನಾಕುಳಂ ವಿಶೇಷ ಸಿಬಿಐ ನ್ಯಾಯಾಲಯದಲ್ಲಿ ಆರೋಪಿಗಳಿಗೆ ಓದಿ ತಿಳಿಸಲಾಯಿತು. ಜತೆಗೆ ದೋಷಾರೋಪ ಪಟ್ಟಿಯ ಪ್ರತಿಯನ್ನು ಆರೋಪಿಗಳಿಗೆ ವಿತರಿಇರಿಸಲಾಯಿತು.ಈ ಮೂಲಕ ಕೊಲೆ ಪ್ರಕರಣದ ವಿಚಾರಣೆಯ ಆರಂಭಿಕ ಕ್ರಮಕ್ಕೆ ನ್ಯಾಯಾಲಯ ಚಾಲನೆ ನೀಡಿದೆ.
ಸಿಪಿಎಂ ಹಿರಿಯ ಮುಖಂಡ, ಮಾಜಿ ಶಾಸಕ ಕೆ.ವಿ ಕುಞÂರಾಮನ್ ಸೇರಿದಂತೆ ಆರೋಪಿಗಳಾಗಿ ಹೆಸರಿಸಲಾಗಿರುವ 24ಮಂದಿಯೂ ನ್ಯಾಯಾಲಯದಲ್ಲಿ ಹಾಜರಿದ್ದು, ಚಾರ್ಜ್‍ಶೀಟ್‍ನಲ್ಲಿ ತಮ್ಮ ಮೇಲೆ ಹೊರಿಸಲಾಗಿರುವ ಆರೋಪಗಳನ್ನು ಅಲ್ಲಗಳೆದಿದ್ದರು. ಪ್ರಕರಣದ ಮುಂದಿನ ವಿಚಾರಣೆಯನ್ನು ಡಿ. 16ಕ್ಕೆ ನ್ಯಾಯಾಲಯ ಮುಂದೂಡಿದೆ. 2019 ¸ಫೆ.17ರಂದು ಕೃಪೇಶ್ ಮತ್ತು ಶರತ್‍ಲಾಲ್ ಅವರನ್ನು ತಂಡವೊಂದು ಬರ್ಬರವಾಗಿ ಕೊಲೆ ನಡೆಸಿತ್ತು.
ಪೆರಿಯ ಕಲ್ಯೋಟ್ ಅವಳಿ ಕೊಲೆ-ವಿಚಾರಣೆ ಆರಂಭ
0
ಡಿಸೆಂಬರ್ 04, 2022