ಕಾಸರಗೋಡು: ಬೇಕಲ ಅಂತಾರಾಷ್ಟ್ರೀಯ ಬೀಚ್ ಉತ್ಸವ ನಗರದಲ್ಲಿ ಹೊಸ ವರ್ಷಾಚರಣೆಗೆ ಎಲ್ಲ ರೀತಿಯ ಸಿದ್ಧತೆ ನಡೆಸಲಾಗಿದೆ. ಹೊಸ ವರ್ಷದ ಹಿಂದಿನ ದಿನ ಸಂಪೂರ್ಣ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದ್ದು, ಮಧ್ಯರಾತ್ರಿ 12ರ ವೇಳೆಗೆ ಕಿವಿಗಡಚಿಕ್ಕುವ ಸುಡುಮದ್ದು ಪ್ರದರ್ಶನದೊಂದಿಗೆ ಹೊಸ ವರ್ಷವನ್ನು ಸ್ವಾಗತಿಸಲಾಗುವುದು.
ಸಾಂಸ್ಕøತಿಕ ಕಲಾ ಪ್ರದರ್ಶನಗಳು ಮಧ್ಯರಾತ್ರಿ 12 ರವರೆಗೆ ಮುಂದುವರಿಯಲಿದೆ. ಜನಪ್ರಿಯ ಹಿನ್ನೆಲೆ ಗಾಯಕ ವಿಧು ಪ್ರತಾಪ್, ಗಜಾಲಿ ಮಾಂತ್ರಿಕ ಅಲೋಶ್ ಮತ್ತು ಇತರ ಪ್ರಸಿದ್ಧ ಗಾಯಕರು ಭಾಗವಹಿಸುವ ಸಂಗೀತ ಸಂಜೆ ಕಾರ್ಯಕ್ರಮ ಹೊಸ ವರ್ಷಾಚರಣೆಗೆ ಮತ್ತಷ್ಟು ಮೆರಗು ತಮದುಕೊಡಲಿದೆ. ರಾತ್ರಿಯನ್ನು ಹೆಚ್ಚು ವರ್ಣಮಯವಾಗಿಸಲು ಸಿನಿಮೀಯ ಚಮತ್ಕಾರಗಳು ಮತ್ತು ಬೆಂಕಿಯ ನೃತ್ಯಗಳೊಂದಿಗೆ ನೃತ್ಯಗಾರರು ರಂಜಿಸಲಿದ್ದಾರೆ. ರಾತ್ರಿ 12 ಗಂಟೆಗೆ ಸುಡುಮದ್ದು ಪ್ರದರ್ಶನದೊಂದಿಗೆ ಅಂದಿನ ಕಾರ್ಯಕ್ರಮ ಮುಕ್ತಾಯಗೊಳ್ಳಳಿದೆ.
ಬೇಕಲ ಬೀಚ್ ಉತ್ಸವ: ನಗರದಲ್ಲಿ ಹೊಸ ವರ್ಷಾಚರಣೆಗೆ ಸಿದ್ಧತೆ
0
ಡಿಸೆಂಬರ್ 30, 2022
Tags