ಬದಿಯಡ್ಕ: ನೀರ್ಚಾಲು ಸಮೀಪದ ಶ್ರೀ ಕಂಠಪಾಡಿ ಶ್ರೀ ಸುಬ್ರಹ್ಮಣ್ಯ ಸ್ವಾಮೀ ದೇವಸ್ಥಾನ, ಕುಕ್ಕಂಕೂಡ್ಲಲ್ಲಿ ಕಿರುಷಷ್ಠಿ ಮಹೋತ್ಸವ ಇಂದು(ಡಿ.28) ಮತ್ತು ನಾಳೆ(ಡಿ.29) ಬ್ರಹ್ಮ ಶ್ರೀ ದೇಲಂಪಾಡಿ ಶ್ರೀ ಗಣೇಶ ತಂತ್ರಿಗಳ ನೇತೃತ್ವದಲ್ಲಿ ಜರಗಲಿದೆ.
ಬೆಳಿಗ್ಗೆ 6 ಕ್ಕೆ ಗಣಪತಿ ಹವನ, 7 ಕ್ಕೆ ದೀಪ ಪ್ರತಿಷ್ಠೆ, ಉಷಃಪೂಜೆ, 9 ರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಶ್ರೀ ಚಾಮುಂಡೇಶ್ವರಿ ಭಜನಾ ಸಂಘ. ಕಜಳ, ಶ್ರೀಅಯ್ಯಪ್ಪ ಮಹಿಳಾ ಭಜನಾ ಸಂಘ.ಬದಿಯಡ್ಕ ತಂಡದವರು ಭಜನಾ ಸಂಕೀರ್ತನೆ ನಡೆಸುವರು. 11 ರಿಂದ ಮಂಗಳೂರು ಹರಿಕಥಾ ಪರಿಷತ್ತಿನ ಆಶ್ರಯದಲ್ಲಿ ಪಿ.ವಿ.ರಾವ್ .ಸುರತ್ಕಲ್ ಅವರಿಂದ ಹರಿಕಥಾ ಶ್ರವಣ ‘ಭಕ್ತ ಕುಚೇಲ’ ನಡೆಯಲಿದೆ. ಹಿಮ್ಮೇಳ ಮನೋಹರ ರಾವ್ ಮಂಗಳೂರು, ರಮೇಶ ಹೆಬ್ಬಾರ್ ಮಂಗಳೂರು ಸಹಕರಿಸುವರು. 11. 30 ರಿಂದ ನವಕಾಭಿಷೇಕ, 12 ರಿಂದ ತುಲಾಭಾರ ಸೇವೆಗಳು, 12.30 ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಲಿದೆ.
ಸಂಜೆ .5.30 ರಿಂದ ಶ್ರೀ ಮಹಾಗಣಪತಿ ಭಜನಾ ಮಂಡಳಿ.ಮಧೂರು ಇವರಿಂದ ಭಜನೆ ನಡೆಯಲಿದೆ. 6 ರಿಂದ ಶ್ರೀ ರಕ್ತೇಶ್ವರೀ ತಂಬಿಲ ಸೇವೆ ನಡೆಯಲಿದೆ. 7.30 ರಿಂದ ಊರ ಬಾಲಕಲಾವಿದರಿಂದ ನೃತ್ಯ ವೈವಿಧ್ಯ ನಡೆಯಲಿದೆ. ರಾತ್ರಿ 8 ಕ್ಕೆ ಏಣಿಯರ್ಪು ಕೋದಂಬರತ್ ತರವಾಡಿನಿಂದ ಶ್ರೀ ವಿಷ್ಣುಮೂರ್ತಿ ಭಂಡಾರ ಆಗಮನ, ತೊಡಙಲ್, ರಾತ್ರಿ 9.30.ಕ್ಕೆ ರಾತ್ರಿಯ ಪೂಜೆ, ಪ್ರಸಾದ ವಿತರಣೆ ನಡೆಯಲಿದೆ. 29 ರಂದು ಬೆಳಿಗ್ಗೆ 7.30 ಕ್ಕೆ ಬೆಳಗಿನ ಪೂಜೆ, 10.30 ಕ್ಕೆ ಶ್ರೀ ವಿಷ್ಣು ಮೂರ್ತಿ ದೈವದ ಕೋಲ ಮತ್ತು ಪ್ರಸಾದ ವಿತರಣೆ ನಡೆಯಲಿದೆ. ಮಧ್ಯಾಹ್ನ 12.30 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಪ್ರಸಾದ ಭೋಜನ, ಭಂಡಾರ ಎಣಿಯರ್ಪು ತರವಾಡಿಗೆ ಹಿಂತಿರುಗುವುದು. ಆನವರಿ. 23 ರಂದು ಶ್ರೀ ಕ್ಷೇತ್ರದಲ್ಲಿ ಪ್ರತಿಷ್ಠಾ ದಿನದಂಗವಾಗಿ ಜಾತ್ರಾ ಮಹೋತ್ಸವ ಜರಗಲಿದೆ.
ಕುಕ್ಕಂಕೂಡ್ಲಲ್ಲಿ ಕಿರುಷಷ್ಠೀ ಮಹೋತ್ಸವ ಇಂದಿನಿಂದ
0
ಡಿಸೆಂಬರ್ 27, 2022