ತಿರುವನಂತಪುರಂ: ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕ್ಲಿಫ್ ಹೌಸ್ ನಲ್ಲಿ ಗನ್ ನಿಂದ ಗುಂಡು ಹಾರಿಸಿದ ಘಟನೆಯಲ್ಲಿ ಎಸ್ ಐಯನ್ನು ಅಮಾನತು ಮಾಡಲಾಗಿದೆ.
ಎಸ್‍ಐ ಹಾಶಿಮ್ ರೆಹಮಾನ್ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಕ್ಷಿಪ್ರ ಕಾರ್ಯಾಚರಣೆ ಪಡೆಯಲ್ಲಿ ಎಸ್‍ಐ ಆಗಿದ್ದರು.
ಮಂಗಳವಾರ ಗನ್ ಕ್ಲೀನ್ ಮಾಡುತ್ತಿದ್ದಾಗ ಕ್ಲಿಫ್ ಹೌಸ್ ನ ಗಾರ್ಡ್ ರೂಮ್ ನಲ್ಲಿ ಗುಂಡು ಹಾರಿಸಲ್ಪಟ್ಟಿತ್ತು. ಎಸ್‍ಐ ಅಜಾಗರೂಕತೆಯಿಂದ ಬಂದೂಕು ನಿಭಾಯಿಸಿದ್ದಾರೆ ಎಂಬ ಪ್ರಾಥಮಿಕ ತನಿಖಾ ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗಿದೆ.
ರಾತ್ರಿ ಕರ್ತವ್ಯದಲ್ಲಿದ್ದ ಅಧಿಕಾರಿಗಳು ತೆರಳಿದ ಬಳಿಕ ಬೆಳಗ್ಗೆ ಕರ್ತವ್ಯಕ್ಕೆ ಬಂದ ಅಧಿಕಾರಿ ಗನ್ ಕ್ಲೀನ್ ಮಾಡುತ್ತಿದ್ದ. ಇದು ಸಾಮಾನ್ಯ ಕಾರ್ಯವಿಧಾನವಾಗಿದೆ. ಈ ವೇಳೆ ಪಿಸ್ತೂಲಿನ ಚೇಂಬರ್ ನಲ್ಲಿ ಬುಲೆಟ್ ಇತ್ತು. ಬಂದೂಕನ್ನು ಕೆಳಗಿಳಿಸಿ ಸ್ವಚ್ಛಗೊಳಿಸುತ್ತಿದ್ದಾಗ ಗುಂಡು ಆಕಸ್ಮಿಕವಾಗಿ ಸಿಡಿದಿತ್ತು. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಭದ್ರತಾ ಲೋಪ ಆರೋಪದ ಮೇಲೆ ತಿರುವನಂತಪುರಂ ನಗರ ಪೋಲೀಸ್ ಆಯುಕ್ತರು ತನಿಖೆಗೆ ಆದೇಶಿಸಿದ್ದರು. ಇದರ ಆಧಾರದ ಮೇಲೆ ಎಸ್‍ಐ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಕ್ಲಿಫ್ ಹೌಸ್ ನಲ್ಲಿ ಸಿಡಿದ ಗುಂಡು: ಕ್ಷಿಪ್ರ ಕಾರ್ಯಪಡೆಯ ಎಸ್‍ಐ ಅಮಾನತು
0
ಡಿಸೆಂಬರ್ 07, 2022