ಕಾಸರಗೋಡು: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ 138ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಕಾಸರಗೋಡು ಮಂಡಲ ಕಾಂಗ್ರೆಸ್ ಸಮಿತಿ ವತಿಯಿಂದ ರ್ಯಾಲಿ ಮತ್ತು ಜಾತ್ಯತೀತ ಸಂಗಮ ಹಮ್ಮಿಕೊಳ್ಳಲಾಯಿತು.
ಕಾಸರಗೋಡು ಮುಖ್ಯ ಅಂಚೆ ಕಚೇರಿ ವಠಾರದಲ್ಲಿ ನಡೆದ ಸಮಾರಂಭದಲ್ಲಿ ಡಿಸಿಸಿ ಪ್ರಧಾನ ಕಾರ್ಯದರ್ಶಿ ಕರುಣ್ ತಾಪ ರ್ಯಾಲಿ ಉದ್ಘಾಟಿಸಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಉಮೇಶ ಅಣಂಗೂರ್ ಅಧ್ಯಕ್ಷತೆ ವಹಿಸಿದ್ದರು. ಕೆಪಿಸಿಸಿ ಕಾರ್ಯದರ್ಶಿ ನಡುಕುಣಿಯಿಲ್ ವಿಜಯಾನ್, ಕೃಷಿ ಕಲ್ಯಾಣ ಸದಸ್ಯ ಕೆ. ಸಿ. ರವಿ, ಮುಖಂಡರಾದ ಆರ್. ಗಂಗಾಧರನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಕೆ. ಖಾಲಿದ್, ಜಿ. ನಾರಾಯಣನ್, ಪುರುಷೋತ್ತಮನ್ ನಾಯರ್, ಆರ್. ಪಿ. ರಮೇಶ್ ಬಾಬು, ಶಾಹುಲ್ ಹಮೀದ್, ಮುನೀರ್ ಬಾಂಗೋಡ್, ಚಿ. ಸಿ. ಟೋನಿ, ಸುಭಾಷ್ ನಾರಾಯಣನ್, ಕಮಲಾಕ್ಷ ಸುವರ್ಣ, ಪಿ. ಕೆ. ವಿಜಯನ್, ಚಿ. ಶಿವಶಂಕರ, ಹರೀಂದ್ರನ್ ಇರಕ್ಕೋಡನ್, ಉಸ್ಮಾನ್ ಅಣಂಗೂರು, ಸಿಲಾನ್ ಅಶ್ರಫ್, ಸಾಹಿದ್ ಪುಳಿಕುನ್ನು, ಶೈಲಜಾ ಕಡಪುರಂ, ಎನ್. ಬಿ. ಜೀಜಾ, ರಾಜೇಶ್ವರಿ, ಪಿ. ಸುಶೀಲಾ ಮತ್ತು ಮಣಿಕಂಠನ್ ಮಂಗಳಶ್ಯೇರಿ ಉಪಸ್ಥಿತರಿದ್ದರು. ಮಂಡಲ ಸಮಿತಿ ಕಾರ್ಯದರ್ಶಿ ಎಂ. ಕೆ. ಚಂದ್ರಶೇಖರನ್ ಮಾಸ್ಟರ್ ಸ್ವಾಗತಿಸಿದರು. ಶಾಫಿ ಅಣಂಗೂರು ವಂದಿಸಿದರು.
ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ=ರ್ಯಾಲಿ, ಜಾತ್ಯತೀತ ಸಂಗಮ
0
ಡಿಸೆಂಬರ್ 30, 2022
Tags