ಪೆರ್ಲ: ಕಾಂಗ್ರೆಸ್ ಪಕ್ಷದ 138ನೇ ಸ್ಥಾಪನ ದಿನಾಚರಣೆಯನ್ನು ಎಣ್ಮಕಜೆ ಮಂಡಲ ಕಾಂಗ್ರೆಸ್ ಸಮಿತಿ ವತಿಯಿಂದ ಪೆರ್ಲ ಪೇಟೆಯಲ್ಲಿ ನಡೆಸಲಾಯಿತು. ಇದರ ಅಂಗವಾಗಿ ಇಡಿಯಡ್ಕದಿಂದ ಆರಂಭಗೊಂಡ ಸ್ಥಾಪನಾ ಸಂದೇಶ ಯಾತ್ರೆಯನ್ನು ಜಿಲ್ಲಾ ಕಾಂಗ್ರೆಸ್ಸ್ ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಜೆ.ಎಸ್. ಮಂಡಲಾಧ್ಯಕ್ಷ ಬಿ.ಎಸ್. ಗಾಂಭೀರ್ ಅವರಿಗೆ ಪಕ್ಷದ ಧ್ವಜ ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದರು.
ಬಳಿಕ ಪೆರ್ಲ ಪೇಟೆಯಲ್ಲಿ ಸಾಗಿ ಬಂದ ಮೆರವಣಿಗೆ ಪಕ್ಷದ ಕಚೇರಿ ಇಂದಿರಾ ಭವನದ ಬಳಿ ಸಮಾಪ್ತಿಗೊಂಡಿತು. ಈ ಸಂದರ್ಭದಲ್ಲಿ ನಡೆದ ಸಭೆಯ ಅಧ್ಯಕ್ಷತೆಯನ್ನು ಬಿ.ಎಸ್. ಗಾಂಭೀರ್ ವಹಿಸಿದ್ದು ಸೋಮಶೇಖರ್ ಜೆ.ಎಸ್. ಕೇಕ್ ಕತ್ತರಿಸುವ ಮೂಲಕ ಉದ್ಘಾಟಿಸಿ ಸಿಹಿ ಹಂಚಿದರು. ಪಕ್ಷದ ನೇತಾರರಾದ ಅಮು ಅಡ್ಕಸ್ಥಳ, ಅಬ್ದುಲ್ಲ ಕುರೆಡ್ಕ, ರಸಾಕ್ ನಲ್ಕ, ಹಾರಿಸ್ ವಳಮುಗೇರ್, ಜಬ್ಬಾರ್ ನಲ್ಕ, ಲೋಕನಾಥ ಮಾಸ್ತರ್ ಮಾಯಿಲೆಂಗಿ, ಸುಧಾಕರ್ ರೈ,ಹನೀಫ್ ಕಾಟುಕುಕ್ಕೆ,ಮಾಯಿಲ ನಾಯ್ಕ್,ಬಟ್ಯ, ಶ್ರೀನಿವಾಸ್ ಶೆಣೈ, ನೌμÁ ಕುದ್ರೆಡ್ಕ, ಆನಂದ ಕಜಂಪಾಡಿ,ದಿನೇಶ್ ಕುಕ್ಕಿಲ,ಜನಾರ್ಧನ ರೈ ಸೇರಾಜೆ,ಶೇರಿಫ್ ಕಟ್ಟದ ಮೂಲೆ, ರಾಮ ಕಜಂಪಾಡಿ ,ಮಹಾಲಿಂಗ ನಾಯ್ಕ್,ಸಂದೇಶ್ ಕಾಟುಕುಕ್ಕೆ,ರಾಧಾಕೃಷ್ಣ ರೈ ಮೊದಲಾದವರು ನೇತೃತ್ವ ನೀಡಿದರು.ವಿಲ್ಪ್ರೆಡ್ ಡಿ.ಸೋಜ ಸ್ವಾಗತಿಸಿ ಲಕ್ಷಣ ಪಡ್ಪು ವಂದಿಸಿದರು.