ಬದಿಯಡ್ಕ: ಕೇರಳ ಸ್ಟೇಟ್ ಪೆನ್ಶನರ್ಸ್ ಸಂಘ್ ಇದರ ಬದಿಯಡ್ಕ ಘಟಕದ ವತಿಯಿಂದ ಡಿ.17 ಪೆನ್ಶನರ್ಸ್ ದಿನವನ್ನು ಆಚರಿಸಲಾಯಿತು. ಬದಿಯಡ್ಕ ಘಟಕದ ಹಿರಿಯ ಸದಸ್ಯ ನಿವೃತ್ತ ಅಧ್ಯಾಪಕ ರಾಜಗೋಪಾಲ ಭಟ್ ಬೊಳುಂಬು ಅವರ ಮನೆಗೆ ತೆರಳಿ ಅವರನ್ನು ಗೌರವಿಸಲಾಯಿತು. ಜಿಲ್ಲಾ ಸಮಿತಿ ಸದಸ್ಯ ಗುಣಾಜೆ ಶಿವಶಂಕರ ಭಟ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ ಪಿಂಚಣಿದಾರರನ್ನು ಗೌರವಿಸುವ ಕಾರ್ಯವು ಸಂಘಟನೆಯ ಬೆಳವಣಿಗೆಗೆ ಪೂರಕವಾಗಲಿದೆ. ಪಿಂಚಣಿ ಎಂಬುದು ಸರ್ಕಾರದ ಔದಾರ್ಯವಲ್ಲ. ಅದು ನೌಕರರ ಹಕ್ಕು ಎಂದು ಸುಪ್ರೀಂಕೋರ್ಟ್ ಹೇಳಿದ ದಿನವನ್ನು ಪಿಂಚಣಿದಾರರ ದಿನವನ್ನಾಗಿ ಆಚರಿಸಲಾಗುತ್ತದೆ ಎಂದರು. ಬದಿಯಡ್ಕ ಘಟಕದ ಅಧ್ಯಕ್ಷ ನಾರಾಯಣ ಭಟ್ ಮೈರ್ಕಳ, ಕಾರ್ಯದರ್ಶಿ ಉದನೇಶ ವೀರ ಕಿಳಿಂಗಾರು, ರಾಮಕೃಷ್ಣ ಭಟ್ ನೀರ್ಚಾಲು ಜೊತೆಗಿದ್ದರು.
ಕೆ.ಎಸ್.ಪಿ.ಎಸ್. ವತಿಯಿಂದ ಪಿಂಚಣಿದಾರರ ದಿನಾಚರಣೆ
0
ಡಿಸೆಂಬರ್ 18, 2022
Tags