ಕಾಸರಗೋಡು: ಚಟ್ಟಂಚಾಲ್ ತೆಕ್ಕಿಲ್‍ನಲ್ಲಿ ಕೋವಿಡ್ ಸಂದರ್ಭ ಕಾರ್ಯಾಚರಿಸಿಕೊಂಡು ಬಂದಿರುವ ಟಾಟಾ ಟ್ರಸ್ಟ್ ಸರ್ಕಾರಿ ಆಸ್ಪತ್ರೆಯನ್ನು ವಿಶೇಷ ಸೌಲಭ್ಯಗಳೊಂದಿಗೆ ಮೇಲ್ದರ್ಜೆಗೇರಿಸುವಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಅಭಿವೃದ್ಧಿ ಸಮಿತಿ ಸಭೆ ಒತ್ತಾಯಿಸಿತು.
ಎಂಡೋಸಲ್ಫಾನ್ ಸಂತ್ರಸ್ತರಿಗೆ ನೆರವಾಗುವ ರೀತಿಯಲ್ಲಿ ಅಸ್ಪತ್ರೆಯನ್ನು ಸಜ್ಜುಗೊಳಿಸಬೇಕು. ಇಲ್ಲಿ ವೈದ್ಯರ ಮತ್ತು ಸಿಬ್ಬಂದಿಯನ್ನು ನೌಕರಿ ವಯವಸ್ಥೆಯನ್ವಯ ವರ್ಗಾಯಿಸುತ್ತಿರುವುದರಿಂದ ಜನರಲ್ಲಿ ಸಂಸ್ಥೆ ಮುಚ್ಚುಗಡೆಗೊಂಡಿರುವ ಭಾವನೆ ಮೂಡುತ್ತಿದೆ. ಪ್ರಸಕ್ತ ಇರುವ ಒಪಿ ವ್ಯವಸ್ಥೆಯಲ್ಲಿಯೇ ಆಸ್ಪತ್ರೆಯನ್ನು ಮುಂದುವರಿಸಬೇಕು ಎಂದು ಸಭೆಯಲ್ಲಿ ಒತ್ತಾಯಿಸಲಾಯಿತು.
ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ ರಣವೀರ್ ಚಾಂಡಿ ಅಧ್ಯಕ್ಷತೆ ವಹಿಸಿದ್ದರು. ಟಾಟಾ ಆಸ್ಪತ್ರೆಯಲ್ಲಿ ಮೂರು ವಾರ. ಯಾವುದೇ ರೋಗಿಗಳಿರಲಿಲ್ಲ. ಟಾಟಾ ಆಸ್ಪತ್ರೆಯನ್ನು ವಿಶೇಷ ವ್ಯವಸ್ಥೆಯೊಂದಿಗೆ ಮೇಲ್ದರ್ಜೆಗೇರಿಸುವ ಕುರಿತು ಸಚಿವರ ಮಟ್ಟದ ಚರ್ಚೆ ನಡೆದಿದೆ ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಸಿಬ್ಬಂದಿ ಕೊರತೆಯಿಂದ ಅಭಿವೃದ್ಧಿ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತಿರುವುದು ಸಭೆಯಲ್ಲಿ ಗಮನಕ್ಕೆ ಬಂದಿರುವುದಾಗಿ ಜಿಲ್ಲಾ ವೈದ್ಯಾಧಿಕಾರಿ ಮಾಹಿತಿ ನೀಡಿದರು.
ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯ ಭಾಗವಾಗಿ ಸರ್ವೀಸ್ ರಸ್ತೆಗಳನ್ನು ಸರಿಯಾಗಿ ಸಿದ್ಧಪಡಿಸದಿರುವ ಬಗ್ಗೆ ಶಾಸಕರು ಗಮನಸೆಳೆದರು. ಚೆರ್ಕಳ-ಬೇವಿಂಜ ಸೇರಿದಂತೆ ವಿವಿಧೆಡೆ ಅನುಭವಿಸಲಾಗುತ್ತಿರುವ ಪ್ರಯಾಣದ ಸಮಸ್ಯೆ ಬಗೆಹರಿಸಬೇಕು. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಶಾಲೆಗಳ ಮಕ್ಕಳಿಗೆ ರಸ್ತೆ ದಾಟುವ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಶಾನವಾಸ್ ಪಾದೂರು ಹೇಳಿದರು.
ನೀಲೇಶ್ವರ ಪುರಸಭೆ ಅಧ್ಯಕ್ಷ ಟಿ.ವಿ. ಶಾಂತಾ, ಗ್ರಾಮ ಪಂಚಾಯಿತಿ ಸಂಘದ ಜಿಲ್ಲಾಧ್ಯಕ್ಷ ಕೆ.ಪಿ. ವತ್ಸಲನ್, ಅಪರ ಜಿಲ್ಲಾಧಿಕಾರಿ ಸುಫಿಯಾನ್ ಅಹ್ಮದ್, ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ ಎ.ಕೆ ರಮೇಂದ್ರನ್, ಜಿಲ್ಲಾ ಯೋಜನಾಧಿಕಾರಿ ಎ.ಎಸ್. ಮಾಯಾ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತದ್ದರು.
ಟಾಟಾ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಬೇಕು-ಜಿಲ್ಲಾ ಅಭಿವೃದ್ಧಿ ಸಮಿತಿ
0
ಡಿಸೆಂಬರ್ 04, 2022
Tags