ಕಾಸರಗೋಡು: ಕಾಞಂಗಾಡು ನಗರಸಭಾ ವ್ಯಪ್ತಿಯ ಗಾಜಿನ ತ್ಯಾಜ್ಯ ತೆರವುಗೊಳಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು. ನಗರಸಭೆ ವ್ಯಪ್ತಿಯಿಂದ ಸಂಗ್ರಹಿಸಲಾದ ಗಾಜಿನ ತ್ಯಾಜ್ಯವನ್ನು ಕ್ಲೀನ್ ಕೇರಳ ಕಂಪನಿಗೆ ಹಸ್ತಾಂತರಿಸಲಾಯಿತು. ತ್ಯಾಜ್ಯ ಸಂಗ್ರಹದ ವಾಹನಕ್ಕೆ ನಗರಸಭೆ ಅಧ್ಯಕ್ಷೆ ಕೆ.ವಿ.ಸುಜಾತಾ ಅವರು ಧ್ವಜ ತೋರಿಸಿ ಚಾಲನೆ ನೀಡಿದರು. ನಗರಸಭೆ ವ್ಯಾಪ್ತಿಯಿಂದ ಸಂಗ್ರಹಿಸಲಾದ 11620 ಕೆ.ಜಿಗಾಜಿನ ತ್ಯಾಜ್ಯವನ್ನು ಕ್ಲೀನ್ ಕೇರಳ ಕಂಪನಿಗೆ ಹಸ್ತಾಂತರಿಸಲಾಯಿತು. ಕಾಞಂಗಾಡು ನಗರಸಭೆ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ.ವಿ.ಸರಸ್ವತಿ, ಕ್ಲೀನ್ ಕೇರಳ ಕಂಪನಿ ಪ್ರತಿನಿಧಿ ಅಂಜಿತಾ ಭಾಗವಹಿಸಿದ್ದರು.
ಕಾಞಂಗಾಡು ನಗರಸಭೆಯಲ್ಲಿ ಗಾಜಿನ ತ್ಯಾಜ್ಯ ತೆರವು ಪ್ರಕ್ರಿಯೆಗೆ ಚಾಲನೆ
0
ಡಿಸೆಂಬರ್ 09, 2022
Tags