ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅಸ್ವಸ್ಥಗೊಂಡ ಕಾರಣ ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (ಏಮ್ಸ್) ದಾಖಲಾಗಿದ್ದಾರೆ.
ಹೊಟ್ಟೆಯ ಸೋಂಕು ಕಾರಣ ಎನ್ನಲಾಗಿದೆ. ಜ್ವರವೂ ಬಾಧಿಸಿದೆ. ಸದ್ಯ ಆರೋಗ್ಯ ಸ್ಥಿತಿ ಸಹಜವಾಗಿದೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ. ಹಲವಾರು ಪರೀಕ್ಷೆಗಳ ಫಲಿತಾಂಶಗಳಿಗಾಗಿ ಕಾಯಲಾಗುತ್ತಿದೆ.
63 ವರ್ಷದ ನಿರ್ಮಲಾ ಸೀತಾರಾಮನ್ ಅವರನ್ನು ಸೋಮವಾರ ಮಧ್ಯಾಹ್ನ ಏಮ್ಸ್‍ಗೆ ದಾಖಲಿಸಲಾಯಿತು. ತಮಿಳುನಾಡಿನ ಎಂಜಿಆರ್ ವಿಶ್ವವಿದ್ಯಾಲಯದ 35ನೇ ಪದವಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಭಾನುವಾರ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಸದ್ಯ ಖಾಸಗಿ ವಾರ್ಡ್‍ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮೋದಿಯವರ ನಂಬಿಕಸ್ಥ ಸಚಿವರಲ್ಲಿ ಒಬ್ಬರು.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಗೆ ಅನಾರೋಗ್ಯ; ಏಮ್ಸ್ ನಲ್ಲಿ ದಾಖಲು
0
ಡಿಸೆಂಬರ್ 26, 2022