ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತಿನಲ್ಲಿ ಎರಡನೇ ನವಕೇರಳ ಯೋಜನೆಗೊಳಪಡಿಸಿದ ಜಲಾನಯನ ಯೋಜನೆಯನ್ವಯ "ನೀರೂರುವ" ಎಂಬ ಜಲ ನಡತೆ ಯೋಜನೆಯ ಉದ್ಘಾಟನೆ ಬಾಳೆಮೂಲೆ ಸಮೀಪದ ಮುಗೇರು ತೋಡಿನಲ್ಲಿ ನಡೆಯಿತು. ಮಂಜೇಶ್ವರ ಶಾಸಕ ಎಕೆಎಂ ಆಶ್ರಫ್ ಕಾರ್ಯಕ್ರಮವನ್ನು ಉದ್ಘಾಟಿಸಿ ನಾಗರಿಕತೆಯ ಮೂಲಭೂತ ಸೌಕರ್ಯಕ್ಕೆ ನಮ್ಮ ನಾಡಿನ ಜಲಾನಯನ ಪ್ರದೇಶಗಳನ್ನು ಸಂರಕ್ಷಿಸಿ ಅಮೂಲಕ ನಾಡಿಗೆ ಪ್ರಯೋಜನಕಾರಿಯಾದ ಯೋಜನೆಗಳನ್ನು ಕೈಗೆತ್ತಿಕೊಳ್ಳಬೇಕೆಂದು ಅವರು ಅಭಿಪ್ರಾಯಪಟ್ಟರು.
ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್.ಅಧ್ಯಕ್ಷತೆವಹಿಸಿದ್ದರು. ಪಂ.ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್.ಗಾಂಭೀರ್, ಪಂ.ಸದಸ್ಯರಾದ ಶಶಿಧರ್, ಮಹೇಶ್ ಭಟ್,ರಾಮಚಂದ್ರ ಎಂ, ವಿ.ಇ.ಒ.ಶ್ರೀಮತಿ ದೇವಿ,ಉದ್ಯೋಗ ಖಾತರಿ ಇಂಜಿನಿಯರ್ ಮೊಹಮ್ಮದ್ ನವಾಸ್ ಮತ್ರ್ಯ, ಒವರ್ ಸೀಯರ್ ಇμರ್Áದ್, ಹೆಡ್ ಕ್ಲಾರ್ಕ್ ಪ್ರೇಮ್ ಚಂದ್, ಅಕೌಟೆಂಟ್ ಶ್ರೀಮತಿ,ಅಕ್ಷತಾ, ಪ್ರಮೋದ್ ಕುಮಾರ್, ಕುಟುಂಬಶ್ರೀ ಎಡಿಎಸ್ ಸದಸ್ಯರು, ಉದ್ಯೋಗಿ ಖಾತರಿ ಕಾರ್ಯಕರ್ತರು ಹಾಗೂ ಊರವರು ಪಾಲ್ಗೊಂಡಿದ್ದರು.
ಎಣ್ಮಕಜೆ ಗ್ರಾ.ಪಂ.ನಲ್ಲಿ ಜಲಾನಯನ ಯೋಜನೆ ನೀರೂರುವ ಯೋಜನೆ ಉದ್ಘಾಟನೆ
0
ಡಿಸೆಂಬರ್ 27, 2022