ಮಧೂರು: ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಸಾಣೀಹಳ್ಳಿ ರಂಗ ಸುಹಾಸ ಟ್ರಸ್ಟ್. ನಿರಂತರವಾಗಿ ಸಾಂಸ್ಕøತಿಕವಾಗಿ ಕಲೆ ಸಾಹಿತ್ಯ. ಸಂಗೀತ.ರಂಗಭೂಮಿ ಸಂಬಂದಿಸಿದ ಕಾರ್ಯಕ್ರಮಗಳ ಅಯೋಜನೆಯನ್ನು ಮಾಡುತ್ತಿದ್ದು, ಇವರ ವತಿಯಿಂದ ನಟ,ನಿರ್ದೇಶಕ,ಸಂಘಟಕ ಉಮೇಶ ಎಂ ಸಾಲಿಯಾನ್ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಕಾಸರಗೋಡಿನ ರಂಗ ಕುಟೀರದಲ್ಲಿ ಕಾರ್ಯಕ್ರಮದಲ್ಲಿ ಹಿರಿಯ ಯಕ್ಷಗಾನ ಕಲಾವಿದ ನರಸಿಂಹ ಬಲ್ಲಾಳ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಯಕ್ಷಗಾನ ಕಲಾವಿದ ಅಪ್ಪುಕುಞ ಉದ್ಘಾಟಿಸಿದರು. ಕರ್ನಾಟಕ ನಾಟಕ ಆಕಾಡೆಮಿ ಸದಸ್ಯರರಾಗಿ ಕಲೆ, ಸಾಹಿತ್ಯ. ಸಂಘಟನೆ ಮೂಲಕ ಕರ್ನಾಟಕದಾಂತ್ಯ ಖ್ಯಾತರಾಗಿರುವ ಕಲಾವಿದರನ್ನು ಸಂಘಟಸಿ, ಸವಾಕ್ ಸಂಘಟನೆಯ ಕೇರಳ ರಾಜ್ಯ ಕೋಶಾಧಿಕಾರಿಯಾಗಿ, ಕೇರಳ ತುಳು ಅಕಾಡೆಮಿ ನಿಕಟಪೂರ್ವ ಅಧ್ಯಕ್ಷರಾಗಿ, ಪ್ರಸ್ತುತ ಕೇರಳ ಸರ್ಕಾರದ ರಾಷ್ಟ್ರಕವಿ ಎಂ ಗೋವಿಂದ ಪೈ ಸ್ಮಾರಕ ಸಮಿತಿ ಕಾರ್ಯದರ್ಶಿ ಹುದ್ದೆಗೆ ನೇಮಕಗೊಂಡಿರುವ ಎಂ. ಉಮೇಶ ಸಾಲಿಯಾನ್ ಅವರನ್ನು ಗೌರವಿಸುವಲ್ಲಿ ಹೆಮ್ಮೆ ಇದೆ ಎಂದು ರಂಗ ಸುಹಾಸ ಟ್ರಸ್ಟ್ ನ ಕಾರ್ಯದರ್ಶಿ ಕೆ.ಮಲ್ಲಯ್ಯ ಶ್ರೀಮಠ ಆಭಿಪ್ರಾಯ ವ್ಯಕ್ತಪಡಿಸಿದರು. ಸಂಚಾಲಕ ಕೆ.ಬಿ.ಮೂರ್ತಿ ಕಬ್ಬಿನಕೆರೆ.ಸವಾಕ್ ಜಿಲ್ಲಾಧ್ಯಕ್ಷೆ ಕೆ.ಭಾರತಿ ಬಾಬು, ಕಾರ್ಯದರ್ಶಿಗಳಾದ ನರೇಂದ್ರ, ಹರಿಕಾಂತ ಸಾಲಿಯಾನ್ ಮಾತನಾಡಿದರು. ರಂಗ ಕುಟೀರದ ಕಾರ್ಯದರ್ಶಿ ನಿಶ್ಮಿತ ಕಮಲೇಶ್ ಸ್ವಾಗತಿಸಿ, ಸವಾಕ್ ಕಾಸರಗೋಡು ವಲಯದ ಅಧ್ಯಕ್ಷ ದಯಾಪ್ರಸಾದ್ ವಂದಿಸಿದರು.
ಸಾಣೀಹಳ್ಳಿ ರಂಗ ಸುಹಾಸ ಟ್ರಸ್ಟ್ ನಿಂದ ಸನ್ಮಾನ
0
ಡಿಸೆಂಬರ್ 31, 2022
Tags