ಮಧೂರು: ನವೀಕರಣಗೊಳ್ಳುತ್ತಿರುವ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ಸಂಬಂಧಿಸಿದ ಕಾಸರಗೋಡು, ಮಧೂರು ಮತ್ತು ಕುಂಬಳೆಯ ಕಳತ್ತೂರು ವಲಯ ಶೌರ್ಯ ಸಮಿತಿಗಳ ವತಿಯಿಂದ ಶ್ರಮದಾನ ನಡೆಯಿತು.
ಈ ಚಟುವಟಿಕೆಗಳಿಗೆ ಮಧೂರು ಒಕ್ಕೂಟ ಮತ್ತು ಕುತ್ಯಾಳ ನವಜೀವನ ಸಮಿತಿ ಸದಸ್ಯರು ಹೆಗಲು ನೀಡಿದರು. ಉದಯಾಸ್ತಮಾನ ಪೂಜೆ ನಡೆಸಿದ ನಂತರ ಶ್ರಮದಾನ ನಡೆಯಿತು.