ಕಾಸರಗೋಡು: ಕ್ರಿಸ್ ಮಸ್ ಆಚರಣೆಯ ಅಂಗವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಾಕಲಾಗಿದ್ದ ಗೋದಲಿ (ಹುಲ್ಲಿನ ಶೆಡ್) ನಾಶಪಡಿಸಲಾಗಿರುವುದು ವರದಿಯಾಗಿದೆ.
ಮುಳಿಯಾರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಘಟನೆ ನಡೆದಿದೆ. ಮುಳಿಯಾರ್ ನಿವಾಸಿ ಮುಸ್ತಫಾ ಅಬ್ದುಲ್ಲಾ ಎಂಬಾತ ಗೋದಲಿ ಧ್ವಂಸಗೊಳಿಸಿರುವುದಾಗಿ ತಿಳಿದುಬಂದಿದೆ.
ನಿನ್ನೆ ಘಟನೆ ನಡೆದಿದೆ. ಸÀರ್ಕಾರಿ ಆಸ್ಪತ್ರೆಯಲ್ಲಿ ಗೋದಲಿ ನಿರ್ಮಿಸಿರುವುದು ಸರಿಯಲ್ಲ ಎಂದು ಮುಸ್ತಫಾ ಪುಡಿಗಟ್ಟಿರುವನು. ಅಲ್ಲಿದ್ದ ಬಾಲ ಏಸುವಿನ ಪುತ್ಥಳಿಯನ್ನು ಎಸೆದಿದ್ದು ಘಟನೆಯ ಬಗ್ಗೆ ವಿಚಾರಿಸಿದವರ ಬಳಿ ಯೇಸು ಕ್ರಿಸ್ತನಿಗೆ ಹೋಗಿ ಹೇಳುವಂತೆ ಉತ್ತರಿಸಿರುವುದಾಗಿ ತಿಳಿದುಬಂದಿದೆ. ಇದರ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ. ಮುಸ್ತಫಾ ಯಾವುದೇ ಹಿಂಜರಿಕೆಯಿಲ್ಲದೆ ತನ್ನ ವಿಳಾಸವನ್ನು ಬಹಿರಂಗಪಡಿಸುತ್ತಾನೆ. ಇದೇ ವೇಳೆ ಆಸ್ಪತ್ರೆಯಲ್ಲಿ ಗೋದಲಿ ನಿರ್ಮಿಸಿದರೆ ಕಾಯಿಲೆಗಳು ವ್ಯಾಪಕಗೊಳ್ಳುತ್ತದೆಯೆಂದೂ ಮುಸ್ತಫಾ ಅವರ ಧ್ವನಿ ಸಂದೇಶ ಹೇಳಿದೆ.
ಘಟನೆಗೆ ತೀವ್ರ ಪ್ರತಿಭಟನೆ ವ್ಯಕ್ತವಾಗಿದೆ. ಮುಸ್ತಫಾ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬಿಜೆಪಿ ಮುಳಿಯಾರ್ ಕ್ಷೇತ್ರ ಸಮಿತಿ ಮುಂದಾಗಿದೆ. ಈ ಘಟನೆ ಆಕ್ಷೇಪಾರ್ಹ ಎಂದು ಬಿಜೆಪಿ ಹೇಳಿದೆ.
ಮುಳಿಯಾರ್ ಸರ್ಕಾರಿ ಆಸ್ಪತ್ರೆಯ ಗೋದಲಿ ಧ್ವಂಸ: ಅನಾರೋಗ್ಯ ಹೆಚ್ಚಳಗೊಳ್ಳುತ್ತದೆ ಎಂದ ಮುಸ್ತಫಾ
0
ಡಿಸೆಂಬರ್ 23, 2022
Tags