ನವದೆಹಲಿ: ಧಾರ್ಮಿಕ ಸ್ವಾತಂತ್ರ್ಯ ಕಪ್ಪು ಪಟ್ಟಿಯಿಂದ ಭಾರತವನ್ನು ಹೊರಗಿಟ್ಟಿರುವ ಅಮೇರಿಕಾದ ನಿರ್ಧಾರವನ್ನು ಪಾಕಿಸ್ತಾನ ಪ್ರಶ್ನಿಸಿದೆ.
ಪಾಕಿಸ್ತಾನವನ್ನು ಅಮೇರಿಕ ಧಾರ್ಮಿಕ ಸ್ವಾತಂತ್ರ್ಯ ಕಪ್ಪು ಪಟ್ಟಿಗೆ ಸೇರಿಸಿದ್ದು, ಈ ಪಟ್ಟಿ ಪಾಕಿಸ್ತಾನದ ವಾಸ್ತವಗಳಿಂದ ಬೇರೆಯದ್ದೇ ಆಗಿದೆ ಎಂದು ಹೇಳಿದೆ.
ವಿದೇಶಾಂಗ ಕಚೇರಿಯ ವಕ್ತಾರ ಮುಮ್ತಾಜ್ ಝಾರ ಬಲೂಚ್ ಈ ಹೇಳಿಕೆ ಬಿಡುಗಡೆ ಮಾಡಿದ್ದು,
ಪಾಕಿಸ್ತಾನ ಬಹು ಧರ್ಮೀಯ ದೇಶವಾಗಿದ್ದು, ಬಹುತ್ವದ ಸಮಾಜವಾಗಿದೆ, ಅನ್ಯ ಮತಗಳೆಡೆಗೆ
ಸೌಹಾರ್ದತೆಯ ಶ್ರೀಮಂತ ಪರಂಪರೆ ಹೊಂದಿದೆ ಎಂದು ಹೇಳಿದ್ದಾರೆ.
ಕಳೆದ ವಾರ ಅಮೇರಿಕ ಪಾಕಿಸ್ತಾನ, ಚೀನಾ, ಕ್ಯೂಬಾ, ನಿಕರಾಗುವಾ ಸೇರಿದಂತೆ ಅನೇಕ ರಾಷ್ಟ್ರಗಳನ್ನು ಧಾರ್ಮಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದಂತೆ ಆತಂಕಕಾರಿ ಪರಿಸ್ಥಿತಿಯಲ್ಲಿರುವ ದೇಶಗಳ ಪಟ್ಟಿಗೆ ಸೇರಿಸಿತ್ತು. ಅಮೇರಿಕಾದ ಈ ನಿರ್ಧಾರಕ್ಕೆ ಪಾಕಿಸ್ತಾನ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು ಏಕಪಕ್ಷೀಯ ನಿರ್ಧಾರ ಎಂದು ಹೇಳಿದೆ.