ಗುಲಾಬಿ ದಳದಿಂದ ನಿಮ್ಮ ಮುಖದ ಅಂದವನ್ನು ಹೆಚ್ಚಿಸಬಹುದು ಗೊತ್ತೇ? ಗುಲಾಬಿ ದಳದಿಂದ ಮುಖದ ಅಂದವನ್ನು ಹೇಗೆ ಹೆಚ್ಚಿಸಬಹುದು ಎಂದು ತಿಳಿಯಲು ಈ ಲೇಖನ ಓದಿ:
ರೋಸ್ ವಾಟರ್: ಗುಲಾಬಿ ದಳಗಳಿಗಿಂತ ಮಾಡಿದ ರೀಸ್ ವಾಟರ್ ಅನ್ನು ಸ್ಕಿನ್ ಟೋನರ್ ಆಗಿ ಬಳಸಬಹುದು.
ರೋಸ್ ವಾಟರ್ ಮಾಡುವುದು ಹೇಗೆ?
1 ಕಪ್ ಗುಲಾಬಿ ಹೂಗಳ ತಾಜಾ ದಳಗಳನ್ನು ಪಾತ್ರೆಗೆ ಹಾಕಿ ಶುದ್ಧವಾದ ನೀರನ್ನು
ಸುರಿಯಿರಿ.ನಂತರ ಕಡಿಮೆ ಉರಿಯಲ್ಲಿ ಒಂದು ಗಂಟೆ ಕಾಯಿಸಿ. ನಂತರ ತಣ್ಣಗಾದ ಮೇಲೆ ಸೋಸಿ
ಬಾಟಲಿನಲ್ಲಿ ಹಾಕಿಟ್ಟು ಬಳಸಬಹುದು.
ಈ ರೀತಿ ಮಾಡಿದರೆ ಯಾವುದೇ ಕೆಮಿಕಲ್ ಇಲ್ಲದ ರೋಸ್ ವಾಟರ್ ನೀವು ಮನೆಯಲ್ಲಿಯೇ ಮಾಡಬಹುದು.
ರೋಸ್ ವಾಟರ್ ಮಾಡುವುದು ಹೇಗೆ?
1 ಕಪ್ ಗುಲಾಬಿ ಹೂಗಳ ತಾಜಾ ದಳಗಳನ್ನು ಪಾತ್ರೆಗೆ ಹಾಕಿ ಶುದ್ಧವಾದ ನೀರನ್ನು
ಸುರಿಯಿರಿ.ನಂತರ ಕಡಿಮೆ ಉರಿಯಲ್ಲಿ ಒಂದು ಗಂಟೆ ಕಾಯಿಸಿ. ನಂತರ ತಣ್ಣಗಾದ ಮೇಲೆ ಸೋಸಿ
ಬಾಟಲಿನಲ್ಲಿ ಹಾಕಿಟ್ಟು ಬಳಸಬಹುದು.
ಈ ರೀತಿ ಮಾಡಿದರೆ ಯಾವುದೇ ಕೆಮಿಕಲ್ ಇಲ್ಲದ ರೋಸ್ ವಾಟರ್ ನೀವು ಮನೆಯಲ್ಲಿಯೇ ಮಾಡಬಹುದು.
ರೋಸ್ ಆಯಿಲ್
ರೋಸ್ ಆಯಿಲ್ ಮಾರುಕಟ್ಟೆಯಲ್ಲಿ ಸಿಗುತ್ತೆ, ಇಲ್ಲದಿದ್ದರೆ ಸ್ವಲ್ಪ ಗುಲಾಬಿ ದಳಗಳನ್ನು
ತೆಂಗಿನೆಣ್ಣೆ ಅಥವಾ ಬಾದಾಮಿ ಎಣ್ಣೆ ಬಿಸಿ ಮಾಡಿ ಅದಕ್ಕೆ ಹಾಕಿ ಒಂದು ರಾತ್ರಿ ಬಿಟ್ಟು
ಸೋಸಿ ಅದನ್ನು ಮುಖದ ಮಸಾಜ್‌ಗೆ ಬಳಸಿ.
ರೋಸ್ ದಳಗಳ ಜ್ಯೂಸ್
ನೀವು ದಿನಾ ಅಥವಾ ವಾರದಲ್ಲಿ ಎರಡರಿಂದ-ಮೂರು ಬಾರಿ ಗುಲಾಬಿ ದಳಗಳ ಜ್ಯೂಸ್
ಕುಡಿಯುವುದರಿಂದ ಮುಖದ ಕಾಂತಿ ತುಂಬಾನೇ ಹೆಚ್ಚುವುದು. ನೀವು ಹಾಲಿಗೆ ಗುಲಾಬಿ ದಳಗಳನ್ನು
ಹಾಕಿ ಜ್ಯೂಸ್ ಮಾಡಿ ಕುಡಿಯಿರಿ.
ಮಾರುಕಟ್ಟೆಯಿಂದ ತರುವ ಗುಲಾಬಿ ಬಗ್ಗೆ ಎಚ್ಚರ!
ನಿಮ್ಮ ಮನೆಯಲ್ಲಿ ಬೆಳೆದ ಗುಲಾಬಿ ಹೂ ಆದರೆ ಯಾವುದೇ ಭಯವಿಲ್ಲ, ಆದರೆ ಮಾರುಕಟ್ಟೆಯಿಂದ
ತರುವ ಗುಲಾಬಿಗಳಿಗೆ ಬೇಗನೆ ಬಾಡದಿರಲು ಕೆಮಿಕಲ್ ಸ್ಪ್ರೇ ಮಾಡಿರುತ್ತಾರೆ, ಅವುಗಳನ್ನು
ಬಳಸಬೇಡಿ, ಬಳಸುವುದಾದರೂ ಅವುಗಳಲ್ಲಿ ಕೆಮಿಕಲ್ ಹಾಕಿಲ್ಲ ಎಂದು ಖಾತರಿಪಡಿಸಿ ಬಳಸಿ.
ತ್ವಚೆ ಒರಟಾಗಿದ್ದರೆ
ನಿಮ್ಮ ತ್ವಚೆ ಒರಟಾಗಿದ್ದರೆ ಗುಲಾಬಿ ದಳದ ಎಣ್ಣೆಯ ಮಸಾಜ್ ಮಾಡುವುದರಿಂದ ತ್ವಚೆ ಮೃದುವಾಗುವುದು, ಅದರಲ್ಲೂ ಸೆನ್ಸಿಟಿವ್ ತ್ವಚೆಯವರಿಗೆ ಈ ಎಣ್ಣೆಯ ಮಸಾಜ್ ತುಂಬಾನೇ ಒಳ್ಳೆಯದು.
ಸ್ಕಿನ್ ಟೋನರ್
ಮುಖದಲ್ಲಿರುವ ಕೊಳೆ, ಮುಖದ ಮೇಕಪ್ ತೆಗೆಯಲು ಸ್ಕಿನ್ ಟೋನರ್ ಆಗಿ ಬಳಸಬಹುದು, ಒಂದು ಕಾಟನ್‌ಗೆ ರೋಸ್‌ವಾಟರ್ ಹಾಕಿ ಅದರಿಂದ ಮುಖವನ್ನು ಒರೆಸಿ. ಒಂದು ಚಿಕ್ಕ ಬಾಟಲಿನಲ್ಲಿ ಒಟ್ಟು ನಿಮ್ಮ ವ್ಯಾನಿಟಿ ಬ್ಯಾಗ್‌ನಲ್ಲಿಡಿ, ಇದರಿಂದ 4 -5 ಗಂಟೆಗೊಮ್ಮೆ ಮುಖವನ್ನು ಸ್ವಚ್ಛ ಮಾಡಬಹುದು.
ರಾತ್ರಿ ಮಲಗುವಾಗ ಇದನ್ನು ಮೇಕಪ್ ತೆಗೆಯಲು ಬಳಸಿ, ಈ ರೋಸ್ ವಾಟರ್ ತ್ವಚೆಯನ್ನು ಪೋಷಣೆ ಮಾಡುತ್ತದೆ.
ಸನ್‌ಸ್ಕ್ರೀನ್ ಲೋಷನ್ ಆಗಿ ಬಳಸಬಹುದು
ನೀವು ಗುಲಾಬಿ ದಳಗಳನ್ನು ಬಳಸಿ ಸನ್‌ಸ್ಕ್ರೀನ್ ಲೋಷನ್ ಕೂಡ ಮಾಡಬಹುದು. ಸ್ವಲ್ಪ ಸೌತೆಕಾಯಿ ರಸ, ಗ್ಲಿಸರಿನ್ ಹಾಗೂ ರೋಸ್ ವಾಟರ್ ಮಿಕ್ಸ್ ಮಾಡಿದರೆ ಸನ್‌ಸ್ಕ್ರೀನ್ ಲೋಷನ್ ರೆಡಿ. ಬಿಸಿಲಿಗೆ ಹೋಗುವಾಗ ಇದನ್ನು ಹಚ್ಚಿದರೆ ತ್ವಚೆಗೆ ಯಾವುದೇ ಹಾನಿ ಉಂಟಾಗದಂತೆ ರಕ್ಷಣೆ ಮಾಡುತ್ತದೆ.
ಡಾರ್ಕ್ ಸರ್ಕಲ್ ಹೋಗಲಾಡಿಸುತ್ತೆ
ರೋಸ್ ವಾಟರ್ ಸ್ವಲ್ಪ ಹತ್ತಿಯ ಉಂಡೆಗೆ ಹಚ್ಚಿ ಕಣ್ಣಿನ ಕೆಳಭಾಗಕ್ಕೆ ಹಚ್ಚಿ, ಹೀಗೆ ಮಾಡುವುದರಿಂದ ಡಾರ್ಕ್ ಸರ್ಕಲ್ ಹೋಗಲಾಡಿಸಬಹುದು.
ತುಟಿಯ ಹೊಳಪು ಹೆಚ್ಚಿಸುವುದು
ಕೆಂಪು ಗುಲಾಬಿ ದಳದ ರಸ ತುಟಿಗೆ ಹಚ್ಚಿ ಹೀಗೆ ಮಾಡಿದರೆ ತುಟಿಯ ಕಪ್ಪು ಬಣ್ಣ ಕಡಿಮೆಯಾಗುವುದು, ತುಟಿಯ ಹೊಳಪು ಹೆಚ್ಚುವುದು.
ಗುಲಾಬಿ ದಳವನ್ನು ಕ್ಲೆನ್ಸರ್ ಆಗಿ ಬಳಸುವುದಾದರೆ
ಸ್ವಲ್ಪ ಗುಲಾಬಿ ದಳ
2-3 ಚಮಚ ಫಿಲ್ಟರ್ ವಾಟರ್
2 ಚಮಚ ಜೇನು
ಮಾಡುವ ವಿಧಾನ
ನೀರಿಗೆ ಗುಲಾಬಿ ದಳಗಳನ್ನು ಹಾಕಿ 4-5 ಗಂಟೆ ಬಿಡಿ
ನಂತರ ಅವುಗಳನ್ನು ಪೇಸ್ಟ್ ಮಾಡಿ, ಅದಕ್ಕೆ 2 ಚಮಚ ಜೇನು ಸೇರಿಸಿ.
ಈಗ ಈ ಮಿಶ್ರಣ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿ 20 ನಿಮಿಷ ಬಿಡಿ
ನಂತರ ತಣ್ಣೀರಿನಿಂದ ಮುಖ ತೊಳೆಯಿರಿ.
ಹನಿ ರೋಸ್ ಮಾಸ್ಕ್
ಬೇಕಾಗುವ ಸಾಮಗ್ರಿ
6-8 ಗುಲಾಬಿ ದಳಗಳು
1 ಚಮಚ ಮೊಸರು
1 ಚಮಚ ಜೇನು
* ಗುಲಾಬಿಗಳನ್ನು ನೀರಿನಲ್ಲಿ 4 ಗಂಟೆ ನೆನೆಹಾಕಿ ರುಬ್ಬಿ, ನಂತರ ಅದಕ್ಕೆ ಮೊಸರು ಹಾಗೂ ಜೇನು ಸೇರಿಸಿ ಮುಖಕ್ಕೆ ಹಚ್ಚಿ, ಚಳಿಗಾಲದಲ್ಲಿ ಮುಖ ಒಡೆಯುವುದನ್ನು ತಡೆಗಟ್ಟಲು ಈ ಮಾಸ್ಕ್ ತುಂಬಾನೇ ಸಹಕಾರಿ.