ಮಂಜೇಶ್ವರ: ಕುಂಜತ್ತೂರು ಸರ್ಕಾರಿ ಪೊಕೇಷನಲ್ ಹೈಯರ್ ಸೆಕೆಂಡರಿ ಶಾಲೆ ಕುಂಜತ್ತೂರಲ್ಲಿ ಇನ್ಫೋಸಿಸ್ ಫೌಂಡೇಶನ್ ಕೊಡುಗೆಯಾಗಿ ನೀಡಿದ ಕಂಪ್ಯೂಟರ್ ಲ್ಯಾಬ್ ಕಟ್ಟಡವನ್ನು ಇತ್ತೀಚೆಗೆ ಮಂಜೇಶ್ವರ ಶಾಸಕ ಎ. ಕೆ. ಎಂ ಅಶ್ರಫ್ ಉದ್ಘಾಟಿಸಿದರು.
ಇನ್ಫೋಸಿಸ್ ಸಂಸ್ಥೆಯ ಕಾಪೆರ್Çರೇಟ್ ವ್ಯವಹಾರಗಳ ಮುಖ್ಯಸ್ಥ ಸಂತೋಷ್ ಅನಂತಪುರ ವಿಶೇಷ ಅತಿಥಿಯಾಗಿ ಉಪಸ್ಥಿತರಿದ್ದರು. ಅವರನ್ನು ಶಾಲಾ ವತಿಯಿಂದ ಸನ್ಮಾನಿಸಲಾಯಿತು. ವೈಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ರಾಜ್ಯಮಟ್ಟದಲ್ಲಿ 3ನೇ ಸ್ಥಾನ ಹಾಗೂ ವುಡ್ ವರ್ಕ್ ನಲ್ಲಿ ರಾಜ್ಯಮಟ್ಟದಲ್ಲಿ ಎ. ಗ್ರೇಡ್ ಗಳಿಸಿದ ಶಾಲೆಯ ಪ್ರತಿಭೆಗಳಾದ ಕುಮಾರಿ ವೀಣಾ ಹಾಗೂ ಜಿಷ್ಣು. ಪಿ. ಎಸ್. ಅವರನ್ನು ಸನ್ಮಾನಿಸಲಾಯಿತು. ಮಂಜೇಶ್ವರ ಗ್ರಾಮ ಪಂಚಾಯತಿ ಅಧ್ಯಕ್ಷೆ ಜೀನ್ ಲವೀನಾ ಮೊಂತೆರೋ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರಗಿತು.
ನಾರಾಯಣ. ಡಿ. (ಜಿಲ್ಲಾ ಪ್ರಾಜೆಕ್ಟ್ ಕೋರ್ಡಿನೇಟರ್. ಎಸ್. ಎಸ್. ಕೆ. ಕಾಸರಗೋಡು ), ಕಮಲಾಕ್ಷಿ. ಕೆ. (ಜಿಲ್ಲಾ ಪಂಚಾಯತಿ ಸದಸ್ಯರು) ನಂದಿಕೇಶನ್. ಎನ್. (ಎ.ಇ.ಒ, ಮಂಜೇಶ್ವರ ), ವಿಜಯ ಕುಮಾರ್ (ಬಿ. ಪಿ ಸಿ. ಬಿ. ಆರ್. ಸಿ. ಮಂಜೇಶ್ವರ) ಮೋಹಿನಿ (ಪಿ. ಟಿ. ಎ. ಅಧ್ಯಕ್ಷರು) ಯೋಗೀಶ್ (ಎಸ್. ಎಂ. ಸಿ. ಅಧ್ಯಕ್ಷ), ಶಿಶುಪಾಲನ್ (ಪ್ರಾಂಶುಪಾಲರು ಜಿ. ವಿ. ಎಚ್. ಎಸ್. ಎಸ್. ಕುಂಜತ್ತೂರು), ಸುಚೇತಾ (ಹಿರಿಯ ಶಿಕ್ಷಕಿ) ಯು. ಎಚ್. ಅಬ್ದುಲ್ ರಹಿಮಾನ್ (ಎಸ್. ಎಂ. ಸಿ. ಸದಸ್ಯರು )ಕೆ. ಪಿ. ಮೊಹಮ್ಮದ್ (ಎಸ್. ಎಂ. ಸಿ. ಉಪಾಧ್ಯಕ್ಷರು) ದಯಾಕರ ಮಾಡ (ಹಳೆವಿದ್ಯಾರ್ಥಿ ಸಂಘದ ಕಾರ್ಯದರ್ಶಿ) ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಅಮಿತ. ಬಿ.(ಶಾಲಾ ನೌಕರ ಸಂಘದ ಕಾರ್ಯದರ್ಶಿ) ವಂದಿಸಿದರು. ಅಧ್ಯಾಪಕ ದಿವಾಕರ ಬಲ್ಲಾಳ್ ರವರ ಪ್ರಾರ್ಥನೆ ಹಾಡಿದರು. ಮುಖ್ಯ ಶಿಕ್ಷಕ ಬಾಲಕೃಷ್ಣ. ಜಿ. ಸ್ವಾಗತಿಸಿ, ಶಿಕ್ಷಕಿ ಕವಿತಾ ಕೂಡ್ಲು ಹಾಗೂ ಶ್ರೀ ಅಶ್ರಫ್ ನಿರೂಪಿಸಿದರು.
ಇನ್ಫೋಸಿಸ್ ಸಂಸ್ಥೆ ಕೊಡುಗೆಯಾಗಿ ನೀಡಿದ ಕಂಪ್ಯೂಟರ್ ಲ್ಯಾಬ್ ಕಟ್ಟಡ ಉದ್ಘಾಟನೆ
0
ಡಿಸೆಂಬರ್ 27, 2022
Tags