ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ರಕ್ಷಣಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಲಷ್ಕರ್-ಇ-ತೈಯಬಾ (ಎಲ್‌ಇಟಿ) ಸಂಘಟನೆಯ ಮೂವರು ಉಗ್ರರು ಹತ್ಯೆಯಾಗಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಉಗ್ರರು ಅಡಗಿಕೊಂಡಿರುವ ಬಗ್ಗೆ ಲಭ್ಯವಾದ ಖಚಿತ ಮಾಹಿತಿ ಆಧರಿಸಿ, ಶೋಪಿಯಾನ್ ಜಿಲ್ಲೆಯ ಝೈನಪೊರಾ ಪ್ರದೇಶದಲ್ಲಿರುವ ಮುಂಜ್ ಮಾರ್ಗ್‌ನಲ್ಲಿ ರಕ್ಷಣಾ ಪಡೆಗಳು ಶೋಧ ಕಾರ್ಯಾಚರಣೆ ಆರಂಭಿಸಿದವು. ಬಳಿಕ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಉಗ್ರರು ಹತ್ಯೆಯಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಉಗ್ರ ಸಂಘಟನೆ ಎಲ್‌ಇಟಿಗೆ ಸೇರಿದ ಮೂವರು ಉಗ್ರರನ್ನು ಹೊಡೆದುರುಳಿಸಲಾಗಿದೆ. ಹತ್ಯೆಯಾದವರ ಗುರುತು ಪತ್ತೆ ಮಾಡಲಾಗುತ್ತಿದೆ. ಹೆಚ್ಚಿನ ಮಾಹಿತಿ ನೀಡಲಾಗುವುದು ಎಂದು 'ಕಾಶ್ಮೀರ ವಲಯ ಪೊಲೀಸ್' ಟ್ವೀಟ್ ಮಾಡಿದೆ.
#ShopianEncounterUpdate: 03 #terrorists linked with proscribed #terror outfit LeT killed. Identification being ascertained. Further details shall follow.
@JmuKmrPolice
@KashmirPolice
#Encounter started at Munjh Marg area of Shopian district. Police and Security Forces are on the job. Details shall follow.
@JmuKmrPolice
184
Reply
Copy