ಕಾಸರಗೋಡು: ಬೇಕಲ್ ಇಂಟರ್‍ನ್ಯಾಶನಲ್ ಬೀಚ್ ಫೆಸ್ಟ್‍ನ ಅಂಗವಾಗಿ ಸಂದರ್ಶಕರ ಟಿಕೆಟ್‍ಗಳನ್ನು ಸಂಗ್ರಹಿಸಲಾಗುವುದು ಮತ್ತು ಒಬ್ಬ ವಿಜೇತರನ್ನು ಆಯ್ಕೆ ಮಾಡಲು ಪ್ರತಿ ದಿನ ಡ್ರಾ ನಡೆಸಲಾಗುವುದು. ತಮ್ಮ ಪ್ರವೇಶ ಟಿಕೆಟ್‍ಗಳಲ್ಲಿ ತಮ್ಮ ಹೆಸರು ಮತ್ತು ಮೊಬೈಲ್ ನಂಬರ್ ನಮೂದಿಸಿ ಉತ್ಸವದ ಪ್ರವೇಶ ದ್ವಾರದಲ್ಲಿರುವ ಬಾಕ್ಸ್‍ನಲ್ಲಿ ಹಾಕಬೇಕು. ಬೆಳಿಗ್ಗೆ 11 ರಿಂದ ರಾತ್ರಿ 11 ಗಂಟೆಯವರೆಗೆ ಸಂಗ್ರಹಿಸಿದ ಟಿಕೆಟ್‍ಗಳನ್ನು ಅದೇ ದಿನ ರಾತ್ರಿ 11.30 ಕ್ಕೆ ಡ್ರಾ ಮಾಡಲಾಗುತ್ತದೆ. ವಿಜೇತರಿಗೆ ಅವರ ಮೊಬೈಲ್ ಸಂಖ್ಯೆಗೆ ಮಾಹಿತಿ ನೀಡಲಾಗುತ್ತದೆ ಜತೆಗೆ ಪ್ರವೇಶದ್ವಾರದಲ್ಲಿರುವ ಬೋರ್ಡ್‍ನಲ್ಲಿ ಮತ್ತು ಉತ್ಸವದ ಅಧಿಕೃತ ಸಾಮಾಜಿಕ ಮಾಧ್ಯಮ ಪುಟಗಳಲ್ಲಿ ಈ ಹೆಸರನ್ನು ಘೋಷಿಸಲಾಗುತ್ತದೆ. ವಿಜೇತರಿಗೆ ಪ್ರತಿದಿನ ಬೆಳಗ್ಗೆ 11 ಗಂಟೆಗೆ ಚಂದ್ರಗಿರಿಯ ಮುಖ್ಯ ಸಭಾಂಗಣದಲ್ಲಿ ಬಹುಮಾನ ವಿತರಿಸಲಾಗುವುದು.
ಬೇಕಲ ಬೀಚ್ ಉತ್ಸವದಲ್ಲಿ ಅದೃಷ್ಟಪರೀಕ್ಷೆಗೆ ಅವಕಾಶ-ಪ್ರವೇಶ ಟಿಕೆಟ್ ಮೇಲೆ ಪ್ರತಿದಿನ ಡ್ರಾ
0
ಡಿಸೆಂಬರ್ 27, 2022