ಕಾಸರಗೋಡು: ಕರಾವಳಿಯಲ್ಲಿ ಸುನಾಮಿ ದುರಂತವನ್ನು ಎದುರಿಸುವ ಬಗ್ಗೆ ಕಲ್ಪಿತ ಕಾರ್ಯಾಚರಣೆ ವಲಿಯಪರಂಬ ಬೀಚ್‍ನಲ್ಲಿ ನಡೆಯಿತು. ಸುನಾಮಿಯಂತಹ ಅಪಾಯವನ್ನು ನಿಭಾಯಿಸಲು ಹಾಗೂ ಕರಾವಳಿ ಸಮುದಾಯಗಳನ್ನು ಬಲಪಡಿಸಲು ಸುನಾಮಿ ಎದುರಿಸಲು ಸಿದ್ಧ ಎಂಬ ಯೋಜನೆಯನ್ನು ಪ್ರಾರಂಭಿಸಲಾಯಿತು. ಇದು ವಿಪತ್ತು ನಿಭಾಯಿಸಲು ಕರಾವಳಿ ಸಮುದಾಯಗಳನ್ನು ಬಲಪಡಿಸುವ ನಿಟ್ಟಿನಲ್ಲಿ 'ಸುನಾಮಿ ರೆಡಿ' ಎಂಬ ಸಾಕ್ಷ್ಯಪತ್ರ ನೀಡಲಿರುವ ಯುನೆಸ್ಕೋ ಅಭಿವೃದ್ಧಿಪಡಿಸಿದ ಯೋಜನೆಯಾಗಿದೆ.
ಪರಿಸರ ಮತ್ತು ಭೌಗೋಳಿಕ ವೈಶಿಷ್ಟ್ಯಗಳನ್ನು ಪರಿಗಣಿಸಿ ವಲಿಯಪರಂಬ ಗ್ರಾಮ ಪಂಚಾಯಿತಿಯನ್ನು ಯೋಜನೆಗೆ ಆಯ್ಕೆ ಮಾಡಲಾಗಿದೆ. ರಾಜ್ಯದ ಆರು ಕರಾವಳಿ ಜಿಲ್ಲೆಗಳ ಆರು ಪಂಚಾಯಿತಿಗಳಲ್ಲಿ ಈ ಯೋಜನೆ ಅನುಷ್ಠಾನಗೊಳ್ಳುತ್ತಿದೆ.
ಸ್ಥಳೀಯ ಸಮುದಾಯಗಳು, ಜನಪ್ರತಿನಿಧಿಗಳು, ವಿಪತ್ತು ನಿರ್ವಹಣಾ ಸಂಸ್ಥೆಗಳು ಮತ್ತು ವಿವಿಧ ಇಲಾಖೆಗಳು ಜಂಟಿಯಾಗಿ ಸುನಾಮಿ ವಿಪತ್ತು ಎದುರಿಸುವ ಯೋಜನೆಗಳು, ನಕ್ಷೆಗಳು, ಜಾಗೃತಿ ತರಗತಿಗಳು ಮತ್ತು ಅಣಕು ಡ್ರಿಲ್‍ಗಳಂತಹ ವಿವಿಧ ಸೂಚಕಗಳ ಆಧಾರದ ಮೇಲೆ ಕರಾವಳಿ ಗ್ರಾಮವನ್ನು ಸುನಾಮಿ ಎದುರಿಸಲು ಸಿದ್ಧ ಎಂದು ದೃಢೀಕರಿಸಲಾಗುತ್ತದೆ. ಇದಕ್ಕೆ ಯುನೆಸ್ಕೋದ ನಿಯಂತ್ರಣದಲ್ಲಿರುವ ಇಂಟರ್‍ಗವರ್ನಮೆಂಟಲ್ ಓಷಿಯಾನೋಗ್ರಾಫಿಕ್ ಕಮಿಷನ್‍ನಿಂದ ಮಾನ್ಯತೆ ನೀಡಲಾಗಿದೆ. ಮುಂದಿನ ವರ್ಷ ಡಿಸೆಂಬರ್ ವೇಳೆಗೆ ಯುನೆಸ್ಕೋ ತಂಡ ಅಂತಿಮ ಘೋಷಣೆ ಮಾಡಲಿದೆ. ಪ್ರಸಕ್ತ ಭಾರತೀಯ ಕರಾವಳಿ ರಾಜ್ಯಗಳಲ್ಲಿ ಒಡಿಶಾದ ಎರಡು ಗ್ರಾಮಗಳು ಮಾತ್ರ ಈ ಮನ್ನಣೆಯನ್ನು ಪಡೆದಿವೆ. ವಲಿಯಪರಂಬ ಬೀಚ್‍ನಲ್ಲಿ ಆಯೋಜಿಸಲಾದ ಕಲ್ಪಿತ ಪ್ರದರ್ಶನವನ್ನು ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರಚಂದ್ ಉದ್ಘಾಟಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ವಿ.ವಿ. ಸಜೀವನ್ ಅಧ್ಯಕ್ಷತೆ ವಹಿಸಿದ್ದರು. ಎಡಿಎಂ ಎ.ಕೆ. ರಮೇಂದ್ರನ್, ಪಂಚಾಯತ್ ಉಪಾಧ್ಯಕ್ಷ ಪಿ. ಶ್ಯಾಮಲಾ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಅನಿಲ್ ಕುಮಾರ್, ಇ.ಕೆ.ಮಲ್ಲಿಕಾ, ಖಾದರ್ ಪಾಂಡಿಯಾಲ, ಕೆ. ಮನೋಹರನ್ ಮತ್ತು ಕಾರ್ಯದರ್ಶಿ ಎಂ.ಪಿ ವಿನೋದಕುಮಾರ್ ಉಪಸ್ಥಿತರಿದ್ದರು. ಪ್ರೇಮ್‍ಜಿ ಪ್ರಕಾಶ್ ಸ್ವಾಗತಿಸಿದರು. ಎನ್.ಮಣಿರಾಜ್ ವಂದಿಸಿದರು. ಡಾ. ಆಲ್ಫ್ರೆಡ್ ಜಾನಿ ಮತ್ತು ಪ್ರೇಮ್‍ಜಿ ಪ್ರಕಾಶ್ ಸುನಾಮಿ ಜಾಗೃತಿ ತರಗತಿ ನಡೆಸಿದರು.
ಸುನಾಮಿ ಎದುರಿಸಲು ನಾವು ಸಿದ್ಧ: ಕಲ್ಪಿತ ಕಾರ್ಯಾಚರಣೆ ಮೂಲಕ ಸಾಬೀತುಪಡಿಸಿದ ಕರಾವಳಿ ಜನತೆ
0
ಡಿಸೆಂಬರ್ 17, 2022
Tags