ಮಂಜೇಶ್ವರ: ಕೇರಳ ಸ್ಟೇಟ್ ಲೈಬ್ರರಿ ಕೌನ್ಸಿಲ್ ಆಯೋಜಿಸಿರುವ ಜನಚೇತನ ಯಾತ್ರೆಯ ಉತ್ತರ ವಲಯ ಜಾಥಾ ‘ಮೂಢನಂಬಿಕೆ ಮತ್ತು ಮೂಢನಂಬಿಕೆಗಳ ವಿರುದ್ಧ ವೈಜ್ಞಾನಿಕ ಚಿಂತನೆ’ ಎಂಬ ಘೋಷಣೆಯೊಂದಿಗೆ ಆರಂಭವಾಗಿದೆ. ಮಂಜೇಶ್ವರ ಗಿಳಿವಿಂಡು ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಆವರಣದಲ್ಲಿ ಖ್ಯಾತ ಚಲನಚಿತ್ರ ನಿರ್ದೇಶಕ ಶಾಜಿ.ಎನ್. ಕರುಣ್ ಉತ್ತರ ಪ್ರಾಂತ ಜಾಥಾ ಉದ್ಘಾಟಿಸಿ ಧ್ವಜಾರೋಹಣ ನೆರವೇರಿಸಿದರು. ಜ್ಞಾನವನ್ನು ಸಂಪಾದಿಸುವಾಗ, ಅದರ ಸಾಮಾಜಿಕ ಪ್ರಸ್ತುತತೆಯನ್ನು ಗುರುತಿಸಬೇಕು. ತಂತ್ರಜ್ಞಾನದಲ್ಲಿ ಸಮಾಜ ಮುಂದುವರೆದಂತೆ ಜಾಗೃತಿ ಮೂಡುತ್ತದೆ, ಸುಳ್ಳು, ಮೂಢನಂಬಿಕೆಗಳು ಸಮಾನಾಂತರವಾಗಿ ವಿನಿಮಯವಾಗುತ್ತಿವೆ ಎಂದವರು ಈ ಸಂದರ್ಭ ತಿಳಿಸಿದರು.
ಜಿಲ್ಲಾ ಗ್ರಂಥಾಲಯ ಕೌನ್ಸಿಲ್ ಅಧ್ಯಕ್ಷ ಕೆ.ವಿ.ಕುಂಞÂ ರಾಮನ್ ಅಧ್ಯಕ್ಷತೆ ವಹಿಸಿದ್ದರು. ಕೇರಳ ಸ್ಟೇಟ್ ಲೈಬ್ರರಿ ಕೌನ್ಸಿಲ್ ರಾಜ್ಯಾಧ್ಯಕ್ಷ ಹಾಗೂ ಜಾಥಾ ಮುಖಂಡ ಡಾ.ಕೆ.ವಿ.ಕುಂಞÂ ಕೃಷ್ಣನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಷ್ಟ್ರೀಯ ನಾಟಕ ಶಾಲೆಯ ಮಾಜಿ ನಿರ್ದೇಶಕ ಸಿ.ಬಸವಲಿಂಗಯ್ಯ ಮುಖ್ಯ ಅತಿಥಿಯಾಗಿದ್ದರು.
ಪ್ರೊ.ಎಂ.ಎಂ.ನಾರಾಯಣನ್ ಪ್ರಧಾನ ಭಾಷಣ ಮಾಡಿದರು. ತುಳು ಅಕಾಡೆಮಿ ಅಧ್ಯಕ್ಷ ಕೆ.ಆರ್.ಜಯಾನಂದ ರಾಷ್ಟ್ರಕವಿ ಗೋವಿಂದ ಪೈ ಅವರನ್ನು ಸ್ಮರಿಸಿದರು.ರಾಜ್ಯ ಗ್ರಂಥಾಲಯ ಕೌನ್ಸಿಲ್ ಮಾಜಿ ಕಾರ್ಯದರ್ಶಿ ನ್ಯಾಯವಾದಿ.ಪಿ. ಅಪ್ಪುಕುಟ್ಟನ್, ಜಿಲ್ಲಾ ಪಂಚಾಯತಿ ಸದಸ್ಯರಾದ ಜಮೀಲಾ ಸಿದ್ದಿಕ್, ನಾರಾಯಣ ನಾಯ್ಕ್, ಗೋಲ್ಡನ್ ಅಬ್ದುಲ್ ರಹಮಾನ್, ಕೆ.ಕಮಲಾಕ್ಷ, ಮೀಂಜ ಪಂಚಾಯತಿ ಅಧ್ಯಕ್ಷೆ ಸುಂದರಿ ಆರ್.ಶೆಟ್ಟಿ, ಮಂಜೇಶ್ವರ ಪಂಚಾಯತಿ ಅಧ್ಯಕ್ಷೆ ಜೀನ್ ಲವೀನಾ ಮೊಂತೆರೋ, ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಸಮಿತಿ ಕಾರ್ಯದರ್ಶಿ ಉಮೇಶ್ ಎಂ.ಸಾಲಿಯಾನ್ ಮೊದಲಾದವರು ಮಾತನಾಡಿದರು. ಜಿಲ್ಲಾ ಗ್ರಂಥಾಲಯ ಕೌನ್ಸಿಲ್ ಕಾರ್ಯದರ್ಶಿ ಡಾ.ಪಿ.ಪ್ರಭಾಕರನ್ ಸ್ವಾಗತಿಸಿ, ಗ್ರಂಥೋಲೋಕಂ ಸಂಪಾದಕ ಹಾಗೂ ಜಾಥಾ ವ್ಯವಸ್ಥಾಪಕ ಪಿ.ವಿ.ಕೆ.ಪನಾಯಾಲ್ ವಂದಿಸಿದರು.
ವಿವಿಧ ಕೇಂದ್ರಗಳಲ್ಲಿ ಮೆರವಣಿಗೆಗೆ ಸ್ವಾಗತ:
‘ಮೂಢನಂಬಿಕೆ ಮತ್ತು ಮೂಢನಂಬಿಕೆಗಳ ವಿರುದ್ಧ ವೈಜ್ಞಾನಿಕ ಚಿಂತನೆ’ ಎಂಬ ಘೋಷವಾಕ್ಯದಡಿ ಕೇರಳ ಸ್ಟೇಟ್ ಲೈಬ್ರರಿ ಕೌನ್ಸಿಲ್ ಆಯೋಜಿಸಿರುವ ಜನಚೇತನ ಯಾತ್ರೆಯ ಉತ್ತರ ವಲಯ ಜಾಥಾಕ್ಕೆ ವಿವಿಧ ಕೇಂದ್ರಗಳಲ್ಲಿ ಸ್ವಾಗತ ಕೋರಲಾಗಿದೆ. ಶುಕ್ರವಾರ ಕುಂಡಂಗುಳಿ ಚೋಯಂ ಕೋಟ್, ನೀಲೇಶ್ವರ, ಪಯ್ಯನ್ನೂರ್ ಮತ್ತು ತಳಿಪರಂಬದÀಲ್ಲಿ ಸ್ವಾಗತ ನೀಡಲಾಯಿತು. ಉತ್ತರ ವಲಯ ಜಾಥಾ ಡಿ. 30 ರಂದು ತ್ರಿಶೂರ್ ತಲುಪಲಿದೆ. ಉತ್ತರ ವಲಯ ಮತ್ತು ದಕ್ಷಿಣ ವಲಯ ಜಾಥಾಗಳು ತ್ರಿಶೂರ್ ತೇಕ್ಕಿಲ್ ಕಾಡ್ ಮೈದಾನದಲ್ಲಿ ಸಮಾರೋಪಗೊಳ್ಳಲಿವೆ.