HEALTH TIPS

ಹೃದಯ ಬೆಸೆಯುವ ಉತ್ಸವವಾಗಿ ಮಾರ್ಪಟ್ಟ ಬೇಕಲ ಫೆಸ್ಟ್-ಸಚಿವ ಮಹಮ್ಮದ್ ರಿಯಾಸ್



 


              ಕಾಸರಗೋಡು: ಬೇಕಲ ಬೀಚ್ ಉತ್ಸವ ಜನರ ಹೃದಯಬೆಸೆಯುವ ಉತ್ಸವವಾಗಿ ಮಾರ್ಪಟ್ಟಿದ್ದು, ಈ ವರ್ಷಕ್ಕೆ ಸೀಮಿತಗೊಳಿಸದೆ, ನಿರಂತರ ನಡೆಸುವ ಬಗ್ಗೆ ಪರಿಗಣಿಸಲಾಗುವುದು ಎಂದು ಪ್ರವಾಸೋದ್ಯಮ ಲೋಕೋಪಯೋಗಿ ಸಚಿವ ಮಹಮ್ಮದ್ ರಿಯಾಸ್ ತಿಳಿಸಿದ್ದಾರೆ.
          ಅವರು  ಬೇಕಲ ಉತ್ಸವದಲ್ಲಿ ಆಯೋಜಿಸಲಾದ ಗಾಳಿಪಟ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.  



        ಕಾಸರಗೋಡಿನ ಜನತೆ ಆರಂಭಿಸಿದ ಬೇಕಲ್ ಉತ್ಸವವನ್ನು ಮುಂದಿನ ದಿನಗಳಲ್ಲಿ ಪ್ರವಾಸೋದ್ಯಮ ಇಲಾಖೆ ಮುಂದುವರಿಸಲಿದೆ. ಕೇರಳದ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಬೇಕಲ ಬೀಚ್ ಹೆಚ್ಚಿನ ಪ್ರಾಶಸ್ತ್ಯ ಪಡೆದ ತಾಣವಾಗಿದ್ದು, ಬೀಚ್ ಉತ್ಸವಕ್ಕೆ ಆಗಮಿಸುತ್ತಿರುವ ಜನತೆಯೇ ಇದಕ್ಕೆ ನಿದರ್ಶನರಾಗಿದ್ದಾರೆ. ಬೀಚ್ ಟೂರಿಸಂ ಅಭಿವೃದ್ಧಿಗೆ ಸರ್ಕಾರ ಮತ್ತು ಪ್ರವಾಸೋದ್ಯಮ ಇಲಾಖೆ ಎಲ್ಲ ಕ್ರಮ ಕೈಗೊಳ್ಳಲಿದೆ.  ರಾಜ್ಯದ ಎಲ್ಲಾ ಪ್ರಮುಖ ಕರಾವಳಿ ಜಿಲ್ಲೆಗಳಲ್ಲಿ ಬೀಚ್ ಉತ್ಸವ ಆಯೋಜಿಸಲು ಬೇಕಲದ ಬೀಚ್‍ಫೆಸ್ಟ್ ಪ್ರೇರಣೆಯಾಗಿದೆ. ಪ್ರವಾಸೋದ್ಯಮ ವಲಯದಲ್ಲಿನ ಜಿಡಿಪಿಯ ಬೆಳವಣಿಗೆಯು ದೇಶೀಯ ಪ್ರವಾಸಿಗರನ್ನು ಆಕರ್ಷಿಸಲು ಕೈಗೊಂಡಿರುವ ಯೋಜನೆಗಳು ಫಲಪ್ರದವಾಗಿರುವುದು ಸಾಬೀತಾಗಿದೆ ಎಂದು ತಿಳಿಸಿದರು.


          ಶಾಸಕ ಸಿ.ಎಚ್.ಕುಞಂಬು ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಅತ್ಯುತ್ತಮ ಕುಟುಂಬಶ್ರೀ ಸಿಡಿಎಸ್‍ಗಿರುವ ರಾಷ್ಟ್ರ ಪ್ರಶಸ್ತಿ ಗಳಿಸಿದ ಪನತ್ತಡಿ ಕುಟುಂಬಶ್ರೀ ಸಿಡಿಎಸ್ ಪ್ರತಿನಿಧಿಗಳನ್ನು ಸಚಿವರು ಅಭಿನಂದಿಸಿದರು.
          ಉದುಮ ಪಂಚಾಯತ್ ಅಧ್ಯಕ್ಷ ಪಿ. ಲಕ್ಷ್ಮಿ, ಪ್ರವಾಸೋದ್ಯಮ ಉಪನಿರ್ದೇಶಕ ಹುಸೇನ್‍ಕುಞÂ,  ಮಾಜಿ ಶಾಸಕ ಕೆ.ಕುಞÂರಾಮನ್, ಮಧು ಮುದಿಯಾಕಲ್, ಹಕೀಂ ಕುನ್ನಿಲ್, ಕೆ.ಇ. ಎ. ಬಕ್ಕರ್ ಉಪಸ್ಥಿತರಿದ್ದರು. ಕುಟುಂಬಶ್ರೀ ಜಿಲ್ಲಾ ಮಿಷನ್ ಸಂಯೋಜಕ ಟಿ. ಟಿ. ಸುರೇಂದ್ರನ್ ಸ್ವಾಗತಿಸಿದರು.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries