ತಿರುವನಂತಪುರಂ: ರಾಜ್ಯದಲ್ಲಿ ಕೊರೊನಾ ತಡೆ ಚಟುವಟಿಕೆಗಳನ್ನು ತೀವ್ರಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.
ಕೊರೋನಾವನ್ನು ಸೂಕ್ಷ್ಮವಾಗಿ ಪರಿಗಣಿಸಬೇಕು. ಕಲಿತ ಪಾಠಗಳನ್ನು ಮರೆಯಬಾರದು, ಲಕ್ಷಣ ಇರುವವರ ಜೊತೆ ಬೆರೆಯಬಾರದು ಎಂದು ಮುಖ್ಯಮಂತ್ರಿ ಹೇಳಿರುವರು.
ಕಡಿಮೆ ಕೊರೋನಾ ಪ್ರಕರಣಗಳಿದ್ದರೂ ಸಹ, ಸೋಂಕಿಗೆ ಒಳಗಾಗದಂತೆ ಕಾಳಜಿ ವಹಿಸಬೇಕು. ಆರೋಗ್ಯ ಸಚಿವೆ ವೀಣಾ ಜಾರ್ಜ್ ನೇತೃತ್ವದಲ್ಲಿ ರ್ಯಾಪಿಡ್ ರೆಸ್ಪಾನ್ಸ್ ಟೀಮ್ ಸಭೆ ನಡೆಸಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಜ್ವರ, ಶೀತ ಮತ್ತು ಗಂಟಲು ನೋವನ್ನು ನಿರ್ಲಕ್ಷಿಸಬೇಡಿ. ಚಿಕಿತ್ಸೆ ಪಡೆಯಿರಿ. ರೋಗಲಕ್ಷಣಗಳು ಇರುವವರ ಜೊತೆ ನಿಕಟ ಸಂಪರ್ಕದಲ್ಲಿ ಇರಬಾರದು ಎಂದು ಮುಖ್ಯಮಂತ್ರಿ ಸುದ್ದಿಗೋಷ್ಠಿಯಲ್ಲಿ ತಿಳಿಸಿರುವರು.
ಕಲಿತ ಪಾಠಗಳನ್ನು ಮರೆಯಬೇಡಿ; ಕೊರೊನಾ ತಡೆಗಟ್ಟುವ ಚಟುವಟಿಕೆಗಳನ್ನು ತೀವ್ರಗೊಳಿಸಲಾಗುವುದು: ಪಿಣರಾಯಿ ವಿಜಯನ್
0
ಡಿಸೆಂಬರ್ 21, 2022
Tags