ಕಾಸರಗೋಡು: ಕಾಞಂಗಾಡು ಬ್ಲಾಕ್ ಪಂಚಾಯಿತಿ ವ್ಯಾಪ್ತಿಯ ಪರಿಶಿಷ್ಟ ಜಾತಿ ಯುವಜನ ಸಮೂಹಗಳಿಗೆ ವಾದ್ಯ ಉಪಕರಣಗಳನ್ನು ಖರೀದಿಸಲು ಅರ್ಜಿ ಆಹ್ವಾನಿಸಿದೆ. ಕಾಞಂಗಾಡು ಬ್ಲಾಕ್ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟ ಗ್ರಾಮ ಪಂಚಾಯಿತಿಗಳಲ್ಲಿರುವ ಪರಿಶಿಷ್ಟ ಜಾತಿಯ ಯುವ ಜನತೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಅಭ್ಯರ್ತಿಗಳು ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದು, ಅರ್ಜಿದಾರರು ಈ ಮೊದಲು ಸೌಲಭ್ಯ ಪಡೆದಿರಬಾರದು. ಜಾತಿ ಪ್ರಮಾಣ ಪತ್ರದೊಂದಿಗೆ ಅರ್ಜಿಯನ್ನು ಡಿಸೆಂಬರ್ 27 ರ ಮೊದಲು ಕಾಂಞಂಗಾಡ್ ಬ್ಲಾಕ್ ಪರಿಶಿಷ್ಟ ಜಾತಿಗಳ ಅಭಿವೃದ್ಧಿ ಕಛೇರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಆಯಾ ಗ್ರಾಮ ಪಂಚಾಯಿತಿಯ ಪರಿಶಿಷ್ಟ ಜಾತಿ ಪ್ರಚಾರಕರು ಅಥವಾ ಕಾಞಂಗಾಡು ಬ್ಲಾಕ್ ಪರಿಶಿಷ್ಟ ಜಾತಿ ಅಭಿವೃದ್ಧಿ ಕಛೇರಿಯನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಪ.ಜಾತಿ ಜನತೆಗೆ ವಾದ್ಯೋಪಕರಣ: ಅರ್ಜಿ ಆಹ್ವಾನ.
0
ಡಿಸೆಂಬರ್ 21, 2022
Tags