ಕಾಸರಗೋಡು: ಹೊಸದುರ್ಗ ತಾಲೂಕಿನ 11ನೇ ಕೃಷಿ ಗಣತಿಯಡಿ ಮಾಹಿತಿ ಸಂಗ್ರಹಿಸುವ ಗಣತಿದಾರರಿಗೆ ಕಾಞಂಗಾಡ್ ವೈರಾಗ್ ಸಭಾಭವನದಲ್ಲಿ ತರಬೇತಿ ಕಾರ್ಯಕ್ರಮ ಆಯೋಜಿಸಲಾಯಿತು. ಆರ್ಥಿಕ ಸಾಂಖ್ಯಿಕ ಇಲಾಖೆಯ ಉಪನಿರ್ದೇಶಕ ಎಸ್.ಎಸ್. ಅಭಿನೇಶ್ ಸಮಾರಂಭ ಉದ್ಘಾಟಿಸಿದರು. ತಾಲೂಕು ಸಾಂಖ್ಯಿಕ ಅಧಿಕಾರಿ ಸಿ.ಹರಿದಾಸನ್ ಅಧ್ಯಕ್ಷತೆ ವಹಿಸಿದ್ದರು.
ಆರ್ಥಿಕ ಸಾಂಖ್ಯಿಕ ಇಲಾಖೆ ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಕೆ.ರಮೇಶ್ ಕುಮಾರ್, ಸಾಂಖ್ಯಿಕ ನಿರೀಕ್ಷಕ ಕೆ.ವೇಣುಗೋಪಾಲನ್, ಸಾಂಖ್ಯಿಕ ಸಂಶೋಧಕ ಕೆ.ಎಂ.ಮಹಮ್ಮದ್ ನೌಫಲ್ ಮಾತನಾಡಿದರು. ಜಿಲ್ಲೆಯಲ್ಲಿ 250ಕ್ಕೂ ಹೆಚ್ಚು ತಾತ್ಕಾಲಿಕ ಗಣತಿದಾರರನ್ನು ನೇಮಿಸಿ ಮಾಹಿತಿ ಸಂಗ್ರಹಣೆ ಮಾಡಲಾಗುತ್ತದೆ. ಪ್ರತಿ ಸ್ಥಳೀಯಾಡಳಿತ ಸಂಸ್ಥೆಯ ವಾರ್ಡುಗಳ ಮನೆಗಳಿಗೂ ಭೇಟಿ ನೀಡಿ ಮಾಲೀಕತ್ವ, ಹಿಡುವಳಿ, ಜಾಗದ ವಿಸ್ತೀರ್ಣ ಮತ್ತು ಒತ್ತುವರಿ ಮಾಡಿಕೊಂಡಿರುವ ಜಮೀನಿನ ಬಗ್ಗೆ ಮಾಹಿತಿ ಸಂಗ್ರಹಿಸಲಾಗುವುದು. ಸ್ಮಾರ್ಟ್ ಫೆÇೀನ್ ಮತ್ತು ಟ್ಯಾಬ್ಲೆಟ್ ಗಳನ್ನು ಬಳಸಿ ಡೇಟಾ ಸಂಗ್ರಹಣೆ ಮಾಡಲಾಗುತ್ತದೆ. ಸಾರ್ವಜನಿಕರು ಈ ಸಮೀಕ್ಷೆಗೆ ಸಂಪೂರ್ಣ ಸಹಕಾರ ನೀಡಿ ನಾಡಿನ ಕೃಷಿ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳಬೇಕು ಎಂದು ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಂಶೋಧನಾ ಅಧಿಕಾರಿ ಎಂ.ಶಾಜಿ ಗಣತಿದಾರರಿಗೆ ತರಬೇತಿ ನೀಡಿದರು.
ಕೃಷಿ ಗಣತಿ: ಮಾಹಿತಿ ಸಂಗ್ರಹ: ಗಣತಿದಾರರಿಗೆ ತರಬೇತಿ
0
ಡಿಸೆಂಬರ್ 31, 2022
Tags