ಕಾಸರಗೋಡು: ಬೇಕಲ ಉತ್ಸವದ ಪ್ರಚಾರಾರ್ಥ ಬ್ಲೂ ಮೂನ್ ಕ್ರಿಯೇಷನ್ಸ್ ವಿಸ್ಮಯ ತೀರಂ ಹಾಗೂ ಬಿಆರ್ ಡಿಸಿ ಸಂಯುಕ್ತ ಆಶ್ರಯದಲ್ಲಿ ವಿವಿಧ ಕಲಾ ಕಾರ್ಯಕ್ರಮಗಳು, ಬಲೂನ್ ಹಾರಾಟ, ಸಿಡಿಮದ್ದು ಪ್ರದರ್ಶನಗಳನ್ನು ಪಳ್ಳಿಕ್ಕೆರೆ ಬೀಚ್ ನಲ್ಲಿ ಏರ್ಪಡಿಸಲಾಗಿತ್ತು.
ಜಿಲ್ಲಾ ಪೆÇಲೀಸ್ ವರಿಷ್ಠ ಡಾ.ವೈಭವ್ ಸಕ್ಸೇನಾ ಅವರು ಬೇಕಲ ಬೀಚ್ ಪಾರ್ಕ್ ನಲ್ಲಿ ಬಲೂನ್ ಗಳನ್ನು ಹಾರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಇದೀಗ ಸಂಭ್ರಮಾಚರಣೆಯ ಸಮಯವಾಗಿದ್ದು, ಎಲ್ಲರೂ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಬೇಕು ಎಂದು ವೈಭವ್ ಸಕ್ಸೇನಾ ಹೇಳಿದರು. ಬೇಕಲ್ ಫಸ್ಟ್ ಇಲ್ಲಿ ಹಬ್ಬದ ವಾತಾವರಣ ನಿರ್ಮಾಣ ಮಾಡಲಿದ್ದು, ಉತ್ಸವಕ್ಕೆ ಬೇಕಾದ ಎಲ್ಲ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಕಾಞಂಗಾಡು ಬ್ಲಾಕ್ ಪಂಚಾಯತ್ ಅಧ್ಯಕ್ಷ ಕೆ.ಮಣಿಕಂಠನ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಾಸಕ ಸಿ.ಎಚ್.ಕುಂಞಂಬು ಭಾಗವಹಿಸಿದ್ದರು.
ಬೇಕಲ್ ಬೀಚ್ ಫೆಸ್ಟಿವಲ್‍ಗೆ ಮುಂಚಿತವಾಗಿ ಪ್ರಚಾರ ಕಾರ್ಯಕ್ರಮದ ಭಾಗವಾಗಿ, ಇದು ಅಂತರರಾಷ್ಟ್ರೀಯ ಪ್ರವಾಸೋದ್ಯಮ ವಲಯದಲ್ಲಿ ಬೇಕಲದ ಸೌಂದರ್ಯವನ್ನು ಎತ್ತಿ ತೋರಿಸುತ್ತದೆ.
ಸುಮಾರು ಇನ್ನೂರು ಕಲಾವಿದರು ಸಾಲುಗಟ್ಟಿ ನಿಂತಿದ್ದರು. ಫ್ಲ್ಯಾಶ್ ಮಾಬ್ ಅಂಗವಾಗಿ ಮೆಗಾ ತಿರುವಾದಿರ ನೃತ್ಯ, ಕೈಮುಟ್ಟಿ ಕಳಿ, ಸಿನಿಮಾ ಡ್ಯಾನ್ಸ್ ಹಾಗೂ ಶಾಸ್ತ್ರೀಯ ನೃತ್ಯ ಪ್ರದರ್ಶನಗೊಂಡಿತು. ಬಲೂನ್ ಫ್ಲೈಟ್‍ಗಳು ಬ್ಲೂ ಮೂನ್ ಬೀಚ್‍ನಲ್ಲಿ ಸಂಜೆ ಬಣ್ಣವನ್ನು ಮೆರುಗುಗೊಳಿಸಿದವು. ಸಿಡಿಮದ್ದುಗಳು ನಭೋಮಂಡಲ ಬೆಳಗಿದವು.
ಬೇಕಲ ಫೆಸ್ಟ್ ಡಿಸೆಂಬರ್ 24 ರಿಂದ ಜನವರಿ 2 ರವರೆಗೆ ನಡೆಯುತ್ತದೆ.
ಉದುಮ ಗ್ರಾ.ಪಂ.ಅಧ್ಯಕ್ಷೆ ಪಿ.ಲಕ್ಷ್ಮಿ, ಬಿಆರ್‍ಡಿಸಿ ಎಂಡಿ ಶಿಜಿನ್ ಪರಂಪತ್, ಕಾರ್ಯಕ್ರಮ ಸಮಿತಿ ಸಂಚಾಲಕ ಹಕೀಂ ಕುನ್ನಿಲ್, ಬೇಕಲ ಪೆÇಲೀಸ್ ಠಾಣಾಧಿಕಾರಿ ಯು.ಪಿ.ವಿಪಿನ್, ಮಧು ಮುತ್ತಿಯಕಲ್ ಮಾತನಾಡಿದರು. ಕೆ.ಇ.ಎ.ಬಕರ್ ಸ್ವಾಗತಿಸಿ, ವಿಸ್ಮಯ ತೀರಂ ಎಂ.ಡಿ.ಮೂಸಾ ಪಾಲಕುನ್ನು ವಂದಿಸಿದರು.