HEALTH TIPS

ಯುವ ಸಂಸದರ ನೋವನ್ನು ಅರ್ಥ ಮಾಡಿಕೊಳ್ಳಿ: ಚಳಿಗಾಲ ಅಧಿವೇಶನಕ್ಕೂ ಮುನ್ನ ಪ್ರಧಾನಿ ಮೋದಿ ಮನವಿ

 

               ನವದೆಹಲಿ: ಯುವ ಸಂಸದರ ನೋವನ್ನು ಅರ್ಥ ಮಾಡಿಕೊಳ್ಳುವ ಮೂಲಕ ಇಂದಿನಿಂದ ಸಂಸತ್ತಿನಲ್ಲಿ ಆರಂಭವಾಗುವ ಚಳಿಗಾಲದ ಅಧಿವೇಶನದಲ್ಲಿ ಅಡೆತಡೆಗಳನ್ನು ತಪ್ಪಿಸುವಂತೆ ಎಲ್ಲ ರಾಜಕೀಯ ಪಕ್ಷಗಳನ್ನು ಪ್ರಧಾನಿ ಮೋದಿ ಅವರು ಒತ್ತಾಯಿಸಿದ್ದಾರೆ.

                ಚಳಿಗಾಲದ ಅಧಿವೇಶನ ಪ್ರಾರಂಭಕ್ಕೂ ಮುನ್ನ ಸಂಸತ್ತಿನ ಹೊರಭಾಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಧಾನಿ ಮೋದಿ, ಸದನದಲ್ಲಿ ಅಡೆತಡೆಗಳು ಎದುರಾದಾಗ ಯುವ ಸಂಸದರು ನಿರಾಶರಾಗುತ್ತಾರೆ.

                      ಅವ್ಯವಸ್ಥೆ ಉಂಟಾದಾಗ ನಾವು ಅಮೂಲ್ಯ ಸಮಯವನ್ನು ಕಳೆದುಕೊಳ್ಳುತ್ತೇವೆ. ಸದನ ನಡೆಸುವುದು ತುಂಬಾ ಮುಖ್ಯವಾಗಿರುವುದರಿಂದ ಎಲ್ಲ ಪಕ್ಷದವರು ಅಡೆತಡೆಗಳನ್ನು ತಪ್ಪಿಸಿ, ಯುವ ಸಂಸದರ ಉತ್ತಮ ಭವಿಷ್ಯಕ್ಕಾಗಿ ಎಲ್ಲ ಪಕ್ಷದವರು ಅವರಿಗೆ ಸದನದಲ್ಲಿ ಚರ್ಚಿಸಲು ಒದೊಂದು ಅವಕಾಶ ಮಾಡಿಕೊಡಬೇಕೆಂದು ಕೇಳಿಕೊಂಡರು.

                   ಸದನ ನಡೆಯಬೇಕು ಎಂಬುದನ್ನು ಪ್ರತಿಪಕ್ಷಗಳು ಸಹ ಒಪ್ಪುತ್ತವೆ. ಎಲ್ಲಾ ಪಕ್ಷಗಳ ನಾಯಕರು ಯುವ ಸಂಸದರ ನೋವನ್ನು ಅರ್ಥಮಾಡಿಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ. ಅಧಿವೇಶನವನ್ನು ಉತ್ತಮವಾಗಿಸಲು ನಾನು ಎಲ್ಲಾ ಪಕ್ಷಗಳು ಮತ್ತು ಸಂಸದರಲ್ಲಿ ಮನವಿ ಮಾಡುತ್ತೇನೆ ಎಂದು ಪ್ರಧಾನಿ ಹೇಳಿದರು.

                     ಇದೇ ಸಂದರ್ಭದಲ್ಲಿ ಜಿ20ಯ ಭಾರತದ ನಾಯಕತ್ವದ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ, ಇದು ಕೇವಲ ರಾಜತಾಂತ್ರಿಕ ಕಾರ್ಯಕ್ರಮವಲ್ಲ ಆದರೆ, ದೇಶದ ಶಕ್ತಿಯನ್ನು ಪ್ರದರ್ಶಿಸುವ ಅವಕಾಶವಾಗಿದೆ ಎಂದು ಹೇಳಿದರು.

               ಈ ಅಧಿವೇಶನದಲ್ಲಿ, ಪ್ರಸ್ತುತ ಜಾಗತಿಕ ಪರಿಸ್ಥಿತಿಯ ನಡುವೆ ದೇಶವನ್ನು ಅಭಿವೃದ್ಧಿಯ ಹೊಸ ಎತ್ತರಕ್ಕೆ ಮತ್ತು ದೇಶವನ್ನು ಮುಂದಕ್ಕೆ ಕೊಂಡೊಯ್ಯುವ ಹೊಸ ಅವಕಾಶಗಳನ್ನು ಗಮನದಲ್ಲಿಟ್ಟುಕೊಂಡು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಪ್ರಯತ್ನಿಸಲಾಗುವುದು. ಎಲ್ಲಾ ಪಕ್ಷಗಳು ಚರ್ಚೆಗಳಿಗೆ ಮೌಲ್ಯವನ್ನು ಸೇರಿಸುತ್ತವೆ ಎಂದು ನನಗೆ ವಿಶ್ವಾಸವಿದೆ ಎಂದು ಪ್ರಧಾನಿ ತಿಳಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries