ಕಾಸರಗೋಡು: ಸೋಮೇಶ್ವರದಿಂದ ಕೇರಳದ ಕುಞÂಮಂಗಲಂ ವರೆಗೆ ವ್ಯಾಪಿಸಿರುವ ಮುಕಯ-ಬೋವಿ ಸಮುದಾಯ ಸಭಾದ 16ನೇ ವಾರ್ಷಿಕ ಮಹಾ ಸಮ್ಮೇಳನ ಮತ್ತು ಸಂಘಟನೆ ನೂತನ ಕಟ್ಟದ ಉದ್ಘಾಟನಾ ಸಮಾರಂಭ ಜ. 1ರಂದು ಬೆಳಗ್ಗೆ 10ಕ್ಕೆ ಕಾಸರಗೋಡು ನೆಲ್ಲಿಕುಂಜೆಯಲ್ಲಿ ಜರುಗಲಿರುವುದಾಗಿ ಸಮಿತಿ ಅಧ್ಯಕ್ಷ ಆನಂದ ಕೋಟ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಕಾಸರಗೋಡಿನ ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ಸಮ್ಮೇಳನ ಉದ್ಘಾಟಿಸುವರು. ಈ ಸಂದರ್ಭ ಸಮುದಾಯದ ಹನ್ನೊಂದು ಕ್ಷೇತ್ರಗಳ ಆಚಾರಕರ್ಮಿಗಳನ್ನು ರಾಜ್‍ಮೋಹನ್ ಉಣ್ಣಿತ್ತಾನ್ ಗೌರವಿಸುವರು. ಸಮುದಾಯದ ನೂತನ ಸಭಾ ಭವನವನ್ನು ರಾಜ್‍ಮೋಹನ್ ಉಣ್ಣಿತ್ತಾನ್ ಹಾಗೂ ಶಾಸಕ ಎನ್.ಎ ನೆಲ್ಲಿಕುನ್ನು ಉದ್ಘಾಟಿಸುವರು. ಮುಕಯ-ಬೋವಿ ಸಮುದಾಯ ಸಮಿತಿ ಅಧ್ಯಕ್ಷ ಆನಂದ ಕೋಟ ಅಧ್ಯಕ್ಷತೆ ವಹಿಸುವರು. ಜಿ.ಪಂ ಅಧ್ಯಕ್ಷ ಬೇಬಿ ಬಾಲಕೃಷ್ಣನ್, ನಗರಸಭಾ ಅಧ್ಯಕ್ಷ ವಕೀಲ ವಿ.ಎಂ ಮುನೀರ್ ಮುಂತಾದವರು ಪಾಲ್ಗೊಳ್ಳುವರು. ಸಮುದಾಯದ ಹನ್ನೊಂದು ಕ್ಷೇತ್ರಗಳ ಒಟ್ಟುಗೂಡುವಿಕೆಯೊಂದಿಗೆ ಸಂಘಟನೆಯನ್ನು ರಚಿಸಲಾಗಿದ್ದು, ಸಮುದಾಯದ ಆಚಾರ, ಸಂಸ್ಕøತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಸಂಘಟನೆ ರಚಿಸಲಾಗಿದೆ. ಆಚಾರ ಸ್ಥಾನಿಕರಿಗೆ ಗೌರವಾರ್ಪಣೆ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅಭಿನಂದನೆ, ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿರುವುದಾಗಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ರವೀಂದ್ರ, ಮಾಧವನ್, ಅನಿಲ್ ಮಾಸ್ಟರ್, ರಚಿತಾ ಕಡವತ್ ಉಪಸ್ಥಿತರಿದ್ದರು.
ಇಂದು ಮುಕಯ-ಬೋವಿ ಸಮುದಾಯ ಸಭಾದ ಮಹಾಸಮ್ಮೇಳನ, ನೂತನ ಸಭಾಭವನ ಉದ್ಘಾಟನೆ
0
ಡಿಸೆಂಬರ್ 31, 2022
Tags