ಕಾಸರಗೋಡು: ಬಳಾಲ್ ಪಂಚಾಯಿತಿಯ ಚುಳ್ಳಿ ಪ್ರದೇಶದಲ್ಲಿ ಹುಲಿ ಸುತ್ತಾಡುತ್ತಿರುವ ಬಗ್ಗೆ ವದಂತಿ ಹಬ್ಬಿದ್ದು, ಇಲ್ಲಿನ ನಿವಾಸಿಯೊಬ್ಬರ ಹಿತ್ತಿಲಲ್ಲಿ ಅರ್ಧ ಭಕ್ಷಿಸಿದ ರೀತಿಯಲ್ಲಿ ಜಿಂಕೆಮರಿ ಕಾಣಿಸಿಕೊಂಡಿರುವುದು ವದಂತಿಗೆ ಪುಷ್ಟಿ ನೀಡಿದೆ.
ನೀಲೇಶ್ವರ ನಿವಾಸಿ ಮೊಯ್ದು ಹಾಜಿ ಎಂಬವರ ಹಿತ್ತಿಲಲ್ಲಿ ಸುಮಾರು ಆರು ತಿಂಗಳು ಪ್ರಾಯದ ಜಿಂಕೆಮರಿಯ ಕಳೇಬರ ಅರ್ಧ ತಿಂದುಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ತಿಂಗಳುಗಳ ಹಿಂದೆಯೂ ಇಲ್ಲಿ ಹುಲಿ ಕಾಣಿಸಿಕೊಂಡಿದ್ದು, ಈ ಬಗ್ಗೆ ಸ್ಥಳೀಯರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಅರಣ್ಯದಿಂದ ಆವೃತವಾಗಿರುವ ಪ್ರದೇಶ ಇದಾಗಿದ್ದು, ಹುಲಿ ಕಾಣಿಸಿಕೊಳ್ಳುತ್ತಿರುವುದು ಸಾಮಾನ್ಯವಾಗಿದೆ. ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು.
ಹುಲಿ ನಾಡಿಗಿಳಿದಿರುವ ಬಗ್ಗೆ ವದಂತಿ-ಅರ್ಧ ತಿಂದ ಸ್ಥಿತಿಯಲ್ಲಿ ಜಿಂಕೆ ಮರಿ ಪ್ರತ್ಯಕ್ಷ
0
ಡಿಸೆಂಬರ್ 27, 2022