ಕಾಸರಗೋಡು: ಜಿಲ್ಲಾ ವೈದ್ಯಕೀಯ ಕಛೇರಿ ಮತ್ತು ರಾಷ್ಟ್ರೀಯ ಆರೋಗ್ಯ ಮಿಷನ್ ಜಂಟಿಯಾಗಿ ಜಿಲ್ಲಾ ಮಟ್ಟದಲ್ಲಿ "ಅತಿಸಾರ ರೋಗ ನಿಯಂತ್ರಣ ಮತ್ತು ಪಾನೀಯ ಚಿಕಿತ್ಸೆ" ವಾರಾಚರಣೆಯ ಜಿಲ್ಲಾ ಮಟ್ಟದ ಉದ್ಘಾಟಿನೆ ಕಾಞಂಗಾಡ್ ರಾಷ್ಟ್ರೀಯ ಆರೋಗ್ಯ ಮಿಷನ್ ಸಭಾಂಗಣದಲ್ಲಿ ನಡೆಯಿತು.
ಜಿಲ್ಲಾ ಆರ್ ಸಿಎಚ್ ಅಧಿಕಾರಿ ಡಾ.ಟಿ.ಪಿ. ಆಮಿನ ಸಮಾರಂಭ ಉದ್ಘಾಟಿಸಿದರು. ಜಿಲ್ಲಾ ಎಂಸಿಎಚ್ ಅಧಿಕಾರಿ ಎನ್.ಜಿ.ತಂಗಮಣಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯಕ್ರಮ ನಿರ್ವಾಹಕ ಡಾ.ರಿಜಿತ್ ಕೃಷ್ಣನ್ ಮುಖ್ಯ ಅತಿಥಿಯಾಗಿದ್ದರು. ವಾರಾಚರಣೆಗೆ ಸಂಬಂಧಿಸಿದಂತೆ ಜಿಲ್ಲಾ ಸಾರ್ವಜನಿಕ ಆರೋಗ್ಯ ಇಲಾಖೆ ವತಿಯಿಂದ ಸಾರ್ವಜನಿಕರ ತಪಾಸಣೆ ನಡೆಸಲಾಯಿತು. ಕರಿಂದಲಂ ಕುಟುಂಬ ಆರೋಗ್ಯ ಕೇಂದ್ರದ ವ್ಯದ್ಯಾಧಿಕಾರಿ ಡಾ. ದಾಲ್ಮಿತಾ ನಿಯಾ ಜೇಮ್ಸ್ ಹಾಗೂ ಜೈನಮ್ಮ ಥಾಮಸ್ ತರಗತಿ ನಡೆಸಿದರು. ಅಬ್ದುಲ್‍ಲತೀಫ್ ಮಠತ್ತಿಲ್ ಸ್ವಾಗತಿಸಿದರು. ಎಸ್. ಸಯನಾ ವಂದಿಸಿದರು.
ಡಿಸೆಂಬರ್ 14 ರಂದು ಮೆರವಣಿಗೆಯ ಅಂಗವಾಗಿ ಆರೋಗ್ಯ ಕಾರ್ಯಕರ್ತರು ಹಾಗೂ ಆಶಾ ಕಾರ್ಯಕರ್ತೆಯರನ್ನು ಒಳಗೊಂಡ ತಂಡ 5 ವರ್ಷದೊಳಗಿನ ಮಕ್ಕಳಿರುವ ಮನೆಗಳಿಗೆ ಭೇಟಿ ನೀಡಿ ಒಆರ್‍ಎಸ್ ಪೊಟ್ಟಣ ವಿತರಣೆ ಹಾಗೂ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ. ರಾಮದಾಸ್ ಎ.ವಿ ರಾಮದಾಸ್ ಮಾಹಿತಿ ನೀಡಿದರು.
"ಅತಿಸಾರ ರೋಗ ನಿಯಂತ್ರಣ'ವಾರಾಚರಣೆ, ಜಾಗೃತಿ ಕಾರ್ಯಕ್ರಮ
0
ಡಿಸೆಂಬರ್ 06, 2022