ಪೆರ್ಲ: ಪೈವಳಿಕೆಯಲ್ಲಿ ಸುಧೀರ್ಘ ಕಾಲ ವಿವಿಧ ಪತ್ರಿಕಾ ಏಜೆಂಟರಾಗಿದ್ದ ದಿ.ಟಿ.ಕೇಶವ ಭಟ್ಟರ ಪತ್ನಿ ಸರೋಜಿನಿ ಅಮ್ಮ(73) ಅಲ್ಪಕಾಲದ ಅಸೌಖ್ಯದಿಂದ ಗುರುವಾರ ಮುಂಜಾನೆ ತಮ್ಮ ತವರು ಮನೆ ನಲ್ಕ ಸಮೀಪದ ಬಾಕಿಲಪದವಿನಲ್ಲಿ ನಿಧನರಾದರು. ಸಂತಾನ ವಿಹೀನರಾಗಿದ್ದ ಅವರು ಸಹೋದರರಾದ ರಾಮಚಂದ್ರ ಭಟ್ ಮ್ಯೆಸೂರು, ನಾರಾಯಣ ಭಟ್ ಬಾಕಿಲಪದವು, ಸಹೋದರಿಯರಾದ ಸಾವಿತ್ರಿ ಅಮ್ಮ ಪಜ್ಜ, ತಿರುಮಲೇಶ್ವರಿ ಅಮ್ಮ ಪುದುಕೋಳಿ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ. ಪೈವಳಿಕೆಯಲ್ಲಿ ಸುಧೀರ್ಘ ಕಾಲ ನೆಲಸಿದ್ದ ಅವರು ಹೋಟೆಲ್ ಉದ್ಯಮದ ಜೊತೆಗೆ ದಾನ-ಧರ್ಮ, ಸಸ್ನೇಹಗಳ ಮೂಲಕ ಜನಾನುರಾಗಿಯಾಗಿದ್ದರು.
ನಿಧನ: ಸರೋಜಿನಿ ಅಮ್ಮ ಪೈವಳಿಕೆ
0
ಡಿಸೆಂಬರ್ 30, 2022