ತಿರುವನಂತಪುರ: ಶಬರಿಮಲೆ ಸನ್ನಿಧಿಯಲ್ಲಿ ಮೇಲ್ಶಾಂತಿ, ಕೀರ್ ಶಾಂತಿ ಮತ್ತು ಪರಿಕರ್ಮಿಗಳೊಂದಿಗೆ ‘ಹರಿವರಾಸನಂ’ ಹಾಡುವ ಮೂಲಕ ಅಯ್ಯಪ್ಪಸ್ವಾಮಿಯನ್ನು ಗಾನಾಲಾಪನೆಯ ಮೂಲಕ ಅರ್ಚಿಸುವ ಉಪಕ್ರಮ ಭಕ್ತರ ಕಿವಿಗಳನ್ನಷ್ಟೇ ಅಲ್ಲ, ಹೃದಯವನ್ನು ಬೆಸೆಯುವುದರೊಂದಿಗೆ ಭಾವಪರವಶಯೆಯೊಂದಿಗೆ ಭಕ್ತಿಸಾಂದ್ರತೆಯ ಹೊಸ ಲೋಕಕ್ಕೊಯ್ಯುತ್ತದೆ.
18ನೇ ಮೆಟ್ಟಿಲಿನ ಕೆಳಗೆ, ದೇವಾಲಯದ ಪೌಳಿಗಳ ಪರಿಸರ ಮತ್ತು ಬೃಹತ್ ಕಾನನದೊಳಗಿನ ಮರಗಳ ಎಡೆಯಲ್ಲಿ ಆ ಹಾಡು ಗಂಧರ್ವರ ಧ್ವನಿಯಂತೆ ವಿಶೇಷ ಪ್ರಪಂಚವೊಂದನ್ನು ಸೃಷ್ಟಿಸುತ್ತದೆ.
ಯಾರನ್ನಾದರೂ ಪ್ರೀತಿ ಮತ್ತು ಭಕ್ತಿಯಲ್ಲಿ ಬೀಳುವಂತೆ ಮಾಡುವ ಹಾಡು ಹರಿವರಾಸನಂ. ಈ ಮಧ್ಯೆ ಮಗುವಿನ ಅಳು ನಿಲ್ಲಿಸಲು ಹೆಣಗಾಡುತ್ತಿರುವ, ಸಾಂತ್ವನಗೊಳಿಸುವ ಹಾಡಿನ ವೀಡಿಯೊವನ್ನು ಸಂಗೀತಗಾರ ರಂಜಿತ್ ರಾಜ್ ಅವರು ಹಂಚಿಕೊಂಡಿದ್ದಾರೆ. ತನ್ನ ತೋಳುಗಳಲ್ಲಿರುವ ಮಗು ನಿರಂತರವಾಗಿ ಅಳುತ್ತಿರುವುದನ್ನು ಮತ್ತು ಹರಿವರಾಸನವನ್ನು ಕೇಳುತ್ತಾ ಶಾಂತವಾಗುವ ವೀಡಿಯೊ ತೋರಿಸುತ್ತದೆ.
ಉಣ್ಣಿಮುಕುಂದನ್ ಅಭಿನಯದ ಮಾಳಿಗÀಪ್ಪುರಂ ಚಿತ್ರದ ಹಾಡುಗಳಿಗೆ ರಂಜಿನ್ ರಾಜ್ ಸಂಗೀತ ಸಂಯೋಜಿಸಿದ್ದಾರೆ. ಚಿತ್ರದಲ್ಲಿ ರಂಜಿನ್ ಹಾಡನ್ನೂ ಹಾಡಿದ್ದಾರೆ. ನಾಳೆ ಮಾಳಿಗÀಪ್ಪುರಂ ರಿಲೀಸ್ ಆಗುತ್ತಿರುವ ಹಿನ್ನೆಲೆಯಲ್ಲಿ ರಂಜಿನ್ ರಾಜ್ ವಿಡಿಯೋ ಶೇರ್ ಮಾಡಿದ್ದಾರೆ.