ಭೋಪಾಲ್: 2019 ರ ಲೋಕಸಭಾ ಚುನಾವಣೆಯಲ್ಲಿ ಭೋಪಾಲ್‌ನಿಂದ ಬಿಜೆಪಿ ನಾಯಕಿ ಪ್ರಜ್ಞಾ ಠಾಕೂರ್ Pragya Thakur ಆಯ್ಕೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಮಧ್ಯಪ್ರದೇಶ ಹೈಕೋರ್ಟ್ ಕಳೆದ ವಾರ ವಜಾಗೊಳಿಸಿದೆ ಎಂದು ಪಿಟಿಐ ಸೋಮವಾರ ವರದಿ ಮಾಡಿದೆ.
ಭೋಪಾಲ್ ನಿವಾಸಿ ರಾಕೇಶ್ ದೀಕ್ಷಿತ್ ಸಲ್ಲಿಸಿದ್ದ ಅರ್ಜಿಯಲ್ಲಿ ಠಾಕೂರ್ ಅವರು ಕೋಮುವಾದಿ ಭಾಷಣಗಳನ್ನು ಮಾಡಿದ್ದಾರೆ ಹಾಗೂ ಚುನಾವಣೆಯಲ್ಲಿ ಗೆಲ್ಲಲು ಧಾರ್ಮಿಕ ಭಾವನೆಗಳನ್ನು ಪ್ರಚೋದಿಸಿದ್ದಾರೆ. ಇದು ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 123 ಅನ್ನು ಉಲ್ಲಂಘಿಸುತ್ತದೆ. ಎಂದು ಆರೋಪಿಸಿದ್ದರು.
ಆದಾಗ್ಯೂ, ಡಿಸೆಂಬರ್ 12 ರಂದು, ಅರ್ಜಿದಾರರು ಹಾಗೂ ಅವರ ವಕೀಲರು ಹಾಜರಾಗಲು ವಿಫಲವಾದ ನಂತರ ಹೈಕೋರ್ಟ್ ಅರ್ಜಿಯನ್ನು ತಿರಸ್ಕರಿಸಬೇಕಾಯಿತು ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.
2008ರ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ ಆರು ಮಂದಿಯಲ್ಲಿ ಪ್ರಜ್ಞಾ ಠಾಕೂರ್ ಕೂಡ ಒಬ್ಬರು.
ಸೆಪ್ಟೆಂಬರ್ 29, 2008 ರಂದು ಉತ್ತರ ಮಹಾರಾಷ್ಟ್ರದ ಮಾಲೆಗಾಂವ್‌ನ ಮಸೀದಿಯೊಂದರ ಬಳಿ ದ್ವಿಚಕ್ರ ವಾಹನಕ್ಕೆ ಕಟ್ಟಲಾದ ಸ್ಫೋಟಕ ಸಾಧನವು ಸ್ಫೋಟಗೊಂಡಾಗ ಆರು ಜನರು ಸಾವನ್ನಪ್ಪಿದ್ದರು ಹಾಗೂ 100 ಮಂದಿ ಗಾಯಗೊಂಡಿದ್ದರು.