ನವದೆಹಲಿ: ಪಾಕಿಸ್ತಾನಕ್ಕೆ ಹೊಂದಿಕೊಂಡಿರುವ ಅಂತರರಾಷ್ಟ್ರೀಯ ಗಡಿ ಬಳಿ ರಕ್ಷಣಾ ಮೂಲಸೌಕರ್ಯಗಳನ್ನು ಆಧುನೀಕರಣಗೊಳಿಸುವ ಕಾರ್ಯವನ್ನು ಭದ್ರತಾಪಡೆಗಳು ಕೈಗೆತ್ತಿಕೊಂಡಿವೆ.
2021ರಲ್ಲಿ ಉಭಯ ದೇಶಗಳು ಕದನ ವಿರಾಮ ಘೋಷಣೆ ಮಾಡಿದ ನಂತರ, ಭಾರತವು ಈಗ ರಕ್ಷಣಾ ಮೂಲಸೌಕರ್ಯಗಳಿಗೆ ಹೊಸರೂಪ ನೀಡುವುದಕ್ಕೆ ಮುಂದಾಗಿದೆ.
ಸೇನಾ ಟ್ಯಾಂಕ್‌ಗಳ ಸುಗಮ ಸಂಚಾರಕ್ಕೆ ಅನುಕೂಲವಾಗುಂತೆ ಇಳಿಜಾರುಗಳನ್ನು ನಿರ್ಮಿಸಲಾಗಿದೆ, ಬಿಎಸ್‌ಎಫ್‌ನ ಬಂಕರ್‌ಗಳನ್ನು ಸದೃಢಗೊಳಿಸಲಾಗಿದೆ. ಜಮ್ಮು ಪ್ರದೇಶದಲ್ಲಿ ಗಡಿಗುಂಟ 26 ಕಿ.ಮೀ. ಉದ್ದಕ್ಕೂ ಮೂಲಸೌಕರ್ಯಗಳ ನವೀಕರಣ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ. ಇದೇ ಭಾಗದಲ್ಲಿ ಇನ್ನೂ 33 ಕಿ.ಮೀ.ಉದ್ದಕ್ಕೂ ನವೀಕರಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಮೂಲಗಳು ಪಿಟಿಐಗೆ ತಿಳಿಸಿವೆ.
ಗಡಿ ಬೇಲಿಗಳ ನಿರ್ವಹಣೆ, ಕಣ್ಗಾವಲು ವ್ಯವಸ್ಥೆ ಸ್ಥಾಪಿಸಿರುವ ಸ್ಥಗಳನ್ನು ಮೇಲ್ದರ್ಜೆಗೇರಿಸುವಂತಹ ಕಾಮಗಾರಿಗಳನ್ನು ಸಹ ಕೈಗೊಳ್ಳಲಾಗಿದೆ ಎಂದು ತಿಳಿಸಿವೆ.