HEALTH TIPS

ರೋಗನಿರೋಧಕ ಶಕ್ತಿ ಕುಗ್ಗಲು ಈ ಅಭ್ಯಾಸಗಳೇ ಕಾರಣ

 ನಾವು ಎಷ್ಟೇ ಕಾಳಜಿ ವಹಿಸಿದರೂ ಪದೇ ಪದೇ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಬಾಧಿಸುತ್ತಲೆ ಇದೇ ಎಂದರೆ ರೋಗನಿರೋಧಕ ಶಕ್ತಿಕಡಿಮೆ ಇದೆ ಎಂದರ್ಥ. ವಾತಾವರಣ ಸಣ್ಣ ಬದಲಾವಣೆ, ಗಾಳಿ, ನೀರು, ಪ್ರಯಾಣ ಹೀಗೆ ಸಣ್ಣ ವಿಚಾರಗಳೂ ಅನಾರೋಗ್ಯಕ್ಕೆ ಕಾರಣವಾದರೆ ಇದು ಉತ್ತಮ ಆರೋಗ್ಯದ ಮುನ್ಸೂಚನೆ ಅಲ್ಲ. ಇದಕ್ಕೆ ಕಾರಣ ಅವರಲ್ಲಿರುವ ರೋಗನಿರೋಧಕ ಶಕ್ತಿಯ ಕೊರತೆ.

ಯಾವಾಗಲೂ ನಿಮ್ಮ ಕೈಗಳನ್ನು ತೊಳೆಯುತ್ತೀರಿ, ರೋಗವಿರುವ ಜನರಿಂದ ದೂರವಿರುತ್ತೀರಿ, ಜೀವಸತ್ವವಿರುವ ಆಹಾರವನ್ನು ಸೇವಿಸುವುದಕ್ಕೆ ಯಾವಾಗಲೂ ಕೂಡ ಮರೆಯುವುದಿಲ್ಲ. ಆದರೂ ಕೂಡ ಜ್ವರ ಇನ್ನಿತರ ಕಾಯಿಲೆಗಳು ನಿಮ್ಮನ್ನ ಬಾಧಿಸುತ್ತಲೇ ಇರುತ್ತವೆಯೇ? ಯಾಕೆ ಹೀಗೆ ಪದೇ ಪದೇ ಸೋಂಕಿಗೆ ಒಳಗಾಗುತ್ತೀರಿ ಎಂಬ ಬಗ್ಗೆ ಆಲೋಚಿಸುತ್ತಿದ್ದೀರಾ?
ದುರ್ಬಲಗೊಳ್ಳುವ ಈ ರೀತಿಯ ರೋಗನಿರೋಧಕ ಶಕ್ತಿಗೆ ಇಂತಹದ್ದೇ ಕಾರಣ ಎಂದು ಹೇಳಲು ಸಾಧ್ಯವಿಲ್ಲ. ಆದರೂ ಕೂಡ ನಾವಿಲ್ಲಿ ಪ್ರಮುಖ ಕಾರಣಗಳನ್ನು ಪಟ್ಟಿ ಮಾಡಿದ್ದೇವೆ. ಇವು ಖಂಡಿತ ನಿಮಗೆ ಆಶ್ಚರ್ಯ ಹುಟ್ಟಿಸುವಂಥ ಕಾರಣವಿರಬಹುದು:  

1. ಕಲುಷಿತ ಸ್ಥಳದಲ್ಲಿ ವಾಸ

ನಿಮ್ಮ ಸುತ್ತಲಿರುವ ಗಾಳಿ ನಿಮ್ಮ ರೋಗನಿರೋಧಕ ಶಕ್ತಿಯ ಮೇಲೆ ಪರಿಣಾಮ ಉಂಟು ಮಾಡುತ್ತದೆ. ಈಗಾಗಲೇ ನಡೆದಿರುವ ಹಲವು ಅಧ್ಯಯನಗಳು ತಿಳಿಸುವ ಪ್ರಕಾರ ಕಲುಷಿತಗೊಂಡಿರುವ ಗಾಳಿಯು ಟಿ-ಜೀವಕೋಶಗಳನ್ನು ನಿಗ್ರಹಿಸುತ್ತದೆ. ಈ ಜೀವಕೋಶಗಳು ನಿಮ್ಮ ರೋಗನಿರೋಧಕ ಶಕ್ತಿಯು ಉತ್ತಮವಾಗಿರುವಂತೆ ನೋಡಿಕೊಳ್ಳುವುದಕ್ಕೆ ಪ್ರಮುಖವಾಗಿರುತ್ತದೆ. ಆದ್ದರಿಂದ, ಗಾಳಿ ಶುದ್ಧೀಕರಣ ಯಂತ್ರ ಬಳಸಿ ಮತ್ತು ಫೇಸ್ ಮಾಸ್ಕ್ ಗಳನ್ನು ಖರೀದಿಸಬಹುದು.

2. ಅತೀ ಹೆಚ್ಚು ಪ್ರೊಟೀನ್‌ ಸೇವಿನೆ ಬೇಡ

ಹೆಚ್ಚಾಗಿ ಶಾಖಾಹಾರಿ ಅಥವಾ ಪ್ರಾಣಿಗಳಿಂದ ಲಭ್ಯವಾಗುವ ಆಹಾರಗಳನ್ನು ಸೇವಿಸುವುದರಿಂದ ನಿಮ್ಮ ದೇಹವು 1ಜಿಎಫ್1 ಹಾರ್ಮೋನನ್ನು ಅಧಿಕವಾಗಿ ಉತ್ಪಾದಿಸುತ್ತದೆ. ಈ ಹಾರ್ಮೋನು ಬೇಗನೆ ವಯಸ್ಸಾಗುವಂತೆ ಮಾಡುವ ಗುಣಲಕ್ಷಣಗಳನ್ನು ಹೊಂದಿದೆ ಮತ್ತು ನಿಮ್ಮ ರೋಗನಿರೋಧಕ ಶಕ್ತಿಯ ಮೇಲೂ ಕೂಡ ಪರಿಣಾಮ ಬೀರುತ್ತದೆ.

ಆದ್ದರಿಂದ, ನೀವು ದಿನದಲ್ಲಿ ಸೇವಿಸುವ ಕ್ಯಾಲೋರಿ ಪ್ರಮಾಣದಲ್ಲಿ 10 ಶೇಕಡಾಕ್ಕಿಂತ ಅಧಿಕವು ಪ್ರಾಣಿ ಮೂಲದಿಂದ ಅಂದರೆ ಮಾಂಸ ಅಥವಾ ಡೈರಿ ಪ್ರೊಡಕ್ಟ್ ಗಳಿಂದ ಬರಬಾರದು ಎಂಬುದು ನಿಮಗೆ ಚೆನ್ನಾಗಿ ನೆನಪಿರಲಿ.

3. ಹೆಚ್ಚು ಸಮಯ ಏಕಾಂಗಿಯಾಗಿ ಕಳೆಯಬೇಡಿ

ಒಂಟಿಯಾಗಿರುವ ವ್ಯಕ್ತಿಗಳು ಒತ್ತಡವನ್ನು ಎದುರಿಸುತ್ತಾರೆ. ದಿನದ ಹೆಚ್ಚು ಸಮಯವನ್ನು ಏಕಾಂಗಿಯಾಗಿ ಕಳೆಯುವ ಇವರಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುತ್ತದೆ.

ಹಾಗಾಗಿ, ನಿಮ್ಮ ಸ್ನೇಹಿತರ ಜೊತೆಗೆ, ಪ್ರೀತಿಪಾತ್ರರ ಜೊತೆಗೆ, ಅಕ್ಕಪಕ್ಕದವರ ಜೊತೆಗೆ ಸಮಯ ಕಳೆಯಿರಿ. ಯಾವ ವ್ಯಕ್ತಿಗಳು ತಮ್ಮ ಸಂಬಂಧದಲ್ಲಿ ಹೆಚ್ಚು ಖುಷಿಯಾಗಿರುತ್ತಾರೋ ಅವರು ಒಂಟಿಯಾಗಿ ಬದುಕುವ ವ್ಯಕ್ತಿಗಳಿಗೆ ಹೋಲಿಸಿದರೆ ಕಡಿಮೆ ಸೋಂಕಿಗೆ ಒಳಗಾಗುತ್ತಾರೆ.

4. ದಿನಪೂರ್ತಿ ಕುಳಿತಿರುವುದು

ಒಂದು ವೇಳೆ ನಿಮ್ಮದು 9 ಘಂಟೆಯಿಂದ 5 ಘಂಟೆವರೆಗಿನ ಕೆಲಸವಾಗಿದ್ದು ಹೆಚ್ಚು ಸಮಯ ಖುರ್ಚಿಯಲ್ಲೇ ಕುಳಿತಿರುತ್ತೀರಿ ಎಂದಾದರೆ ನಿಮ್ಮ ಚಯಾಪಚಯ ಕ್ರಿಯೆಯು ನಿಧಾನಗೊಳ್ಳುತ್ತದೆ. ಇದು ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಪೋಷಕಾಂಶಗಳನ್ನು ಸಾಮಾನ್ಯಕ್ಕಿಂತ ನಿಧಾನಗತಿಯಲ್ಲಿ ಹೀರಿಕೊಳ್ಳುವುದಕ್ಕೆ ಕಾರಣವಾಗುವ ಸಾಧ್ಯತೆ ಇದೆ.

ಹಾಗಾಗಿ, ಪ್ರತಿ ಅರ್ಧ ಘಂಟೆಗೆ ಒಮ್ಮೆ 5 ನಿಮಿಷ ಬ್ರೇಕ್ ತೆಗೆದುಕೊಳ್ಳುವುದನ್ನು ಮರೆಯಬೇಡಿ. ಹೀಗೆ ಸ್ವಲ್ಪ ಚಲನೆಯಲ್ಲಿರುವುದರಿಂದ ನಿಮ್ಮ ದೇಹದ ಮಾಂಸಖಂಡಗಳು ಆಕ್ಟೀವ್ ಆಗಿ ಇರುತ್ತದೆ ಮತ್ತು ನಿಮ್ಮ ಚಯಾಪಚಯ ಕ್ರಿಯೆಯು ಸರಾಗವಾಗಿ ಇರುತ್ತದೆ.


 

 

 

Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries