ಬದಿಯಡ್ಕ: ಬದಿಯಡ್ಕ ಸಮುದಾಯ ಆರೋಗ್ಯ ಕೇಂದ್ರದ ಆಶ್ರಯದಲ್ಲಿ ನಡೆದ ವಿಶ್ವ ಏಡ್ಸ್ ದಿನಾಚರಣೆಯು ಗಮನಾರ್ಹವಾಗಿತ್ತು. ರೆಡ್ ರಿಬ್ಬನ್ ಧರಿಸಿ ಜಾಗೃತಿ ರ್ಯಾಲಿ, ವಿಚಾರ ಸಂಕಿರಣ, ಚಿತ್ರ ಪ್ರದರ್ಶನ ಹಾಗೂ ಪ್ರತಿಜ್ಞೆ ನಡೆಸಲಾಯಿತು. ಬದಿಯಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬಿ.ಶಾಂತಾ ಉದ್ಘಾಟಿಸಿದರು. ಉಪಾಧ್ಯಕ್ಷ ಎಂ.ಅಬ್ಬಾಸ್ ಅಧ್ಯಕ್ಷತೆ ವಹಿಸಿದ್ದರು. ವಿಚಾರ ಸಂಕಿರಣದಲ್ಲಿ ವೈದ್ಯಾಧಿಕಾರಿ ಡಾ.ಸುಕೇಶ್ ವಿಷಯ ಮಂಡಿಸಿದರು.
ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ರಶೀದಾ ಹಮೀದ್, ಪಂಚಾಯಿತಿ ಸದಸ್ಯ ಶ್ಯಾಮಪ್ರಸಾದ್ ಮಾನ್ಯ, ನೀರ್ಚಾಲ್ ಮಹಾಜನ ಹೈಯರ್ ಸೆಕೆಂಡರಿ ಶಾಲೆಯ ಎನ್‍ಎಸ್‍ಎಸ್ ಕಾರ್ಯಕ್ರಮ ಅಧಿಕಾರಿ ಎ.ರಾಜನ್, ನವಜೀವನ ಹೈಯರ್ ಸೆಕೆಂಡರಿ ಶಾಲೆಯ ಎನ್‍ಎಸ್‍ಎಸ್ ಕಾರ್ಯಕ್ರಮ ಅಧಿಕಾರಿ ಪಿ.ವಿ.ಪಿ.ರಾಜೀವನ್, ಐಸಿಟಿಎಸ್ ಸಲಹೆಗಾರ ಟಿ.ಚಿತ್ರಾ ರೈ, ಸಾರ್ವಜನಿಕ ಆರೋಗ್ಯ ನೂರಸೇಲಿ ಮಾತನಾಡಿದರು. ಕಿರಿಯ ಆರೋಗ್ಯ ನಿರೀಕ್ಷಕ ಕೆ.ಕೆ.ಜಾಕೀರ್ ಪ್ರಮಾಣ ವಚನ ಬೋಧಿಸಿದರು. ಕಿರಿಯ ಆರೋಗ್ಯ ನಿರೀಕ್ಷಕ ಕೆ.ಎಸ್.ರಾಜೇಶ್ ಸ್ವಾಗತಿಸಿ, ಎ.ಕೆ.ಬಾಬು ವಂದಿಸಿದರು. ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು, ಆರೋಗ್ಯ, ಆಶಾಕಾರ್ಯಕರ್ತೆಯರು, ನವಜೀವನ ಹೈಯರ್ ಸೆಕೆಂಡರಿ ಶಾಲೆಯ ಎನ್.ಎಸ್.ಎಸ್ ಕಾರ್ಯಕರ್ತರು, ಪೋಲೀಸ್ ಕೆಡೆಟ್, ಎನ್.ಸಿ.ಸಿ., ರೆಡ್ ಕ್ರಾಸ್ ಸಂಸ್ಥೆಯವರು ಭಾಗವಹಿಸಿದ್ದರು. ಬದಿಯಡ್ಕ ಠಾಣಾಧಿಕಾರಿ ವಿನೋದಕುಮಾರ್ ಅವರು ಬಸ್ ನಿಲ್ದಾಣ ಪ್ರದೇಶದಲ್ಲಿ ಆರೋಗ್ಯ ಮೇಲ್ವಿಚಾರಕ ಬಿ.ಅಶ್ರಫ್ ಅವರಿಗೆ ಕೆಂಪು ರಿಬ್ಬನ್ ಕಟ್ಟಿದರು.
ಬದಿಯಡ್ಕದಲ್ಲಿ ವಿಶ್ವ ಏಡ್ಸ್ ದಿನಾಚರಣೆ
0
ಡಿಸೆಂಬರ್ 04, 2022
Tags